ಪಾರ್ಶ್ವವಾಯು ಪೀಡಿತ ಚಾಲಕನಿಂದ ಬಸ್ ಓಡಿಸಿದ ಬಿಎಂಟಿಸಿ!

Prasthutha|

ಬಲಗೈ ಸ್ವಾಧೀನ ಕಳೆದುಕೊಂಡಿದ್ದ ಚಾಲಕ

- Advertisement -

ಬೆಂಗಳೂರು :  ಪಾರ್ಶ್ವವಾಯುವಿನಿಂದ ಬಲಗೈ ಸ್ವಾಧೀನ ಕಳೆದುಕೊಂಡಿರುವ ಚಾಲಕರೊಬ್ಬರು ಬಿಎಂಟಿಸಿ ಬಸ್ ಸಂಚಾರ ಮಾಡಿತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪ್ರಯಾಣಿಕರ ಬಗ್ಗೆ ಕಾಳಜಿಯೇ ಬಿಎಂಟಿಸಿಗೆ ಇಲ್ವಾ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದಿಗೆ 10ನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬಿಎಂಟಿಸಿ ಸೇರಿದಂತೆ ವಿವಿಧ ಬಸ್ ಗಳ ಸಂಚಾರ ಆರಂಭಗೊಂಡಿದೆ.  ನಿವೃತ್ತ ನೌಕರರು ಸೇರಿದಂತೆ ಪ್ರಯಾಣಿಕರ ಬಗ್ಗೆ ಬಿಎಂಟಿಸಿ ಜವಾಬ್ದಾರಿ, ಕಾಳಜಿ ತೋರದಂತೆ ಕಂಡು ಬಂದಿದ್ದು, ಬಲಗೈ ಸ್ವಾಧೀನ ಕಳೆದುಕೊಂಡ ಸಿಬ್ಬಂದಿಯಿಂದಲೇ ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಹಲವು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತನಾಗಿ ಬಲಗೈ ಸ್ವಾಧೀನ ಕಳೆದುಕೊಂಡ ಚಾಲಕನೋರ್ವನಿಂದಲೇ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎನ್ನಲಾಗಿದ್ದು, ಇಂತಹ ಚಾಲಕನು ಚಾಲನೆ ಮಾಡುವ ಸಂದರ್ಭದಲ್ಲಿ ಏನಾದರೂ ಅನಾಹುತ ಆದರೆ ಯಾರು ಹೊಣೆ ಎಂದು ಸಾರ್ವಜನಿಕರು ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp