ಹುಶಾರ್ ! ಪಿಂಕ್ ವಾಟ್ಸಪ್ ಎಂಬ ಮೋಹಕ್ಕೆ ಬಲಿಯಾಗದಿರಿ ಜೋಕೆ !

Prasthutha: April 16, 2021

ಇಂದು ಬಹುತೇಕರ ವಾಟ್ಸಪ್ ಮತ್ತು ಇತರೆ ಸಾಮಾಜಿಕ ತಾಣಗಳ ವೇದಿಕೆಗಳಲ್ಲಿ ಪಿಂಕ್ ವಾಟ್ಸಪ್ ಎಂಬ ಹೊಸ ವಾಟ್ಸಪ್ ವರ್ಶನ್ ಬಂದಿದೆ ಎಂದು ಅದನ್ನು ಒತ್ತಲು ಹೇಳಿ ಲಿಂಕ್ ಕಳಿಸಿದ್ದರು. ಇದನ್ನು ನಿಜವೆಂದು ತಿಳಿದು ಒತ್ತಿದವರಿಗೆ ತಿಳಿಯದೆಯೇ ಅವರಿರುವ ಎಲ್ಲಾ ಗ್ರೂಪುಗಳಿಗೆ ಅದರ ಲಿಂಕ್ ಹಂಚಿಕೆಯಾಗುತ್ತಿತ್ತು. ಹೀಗೆ ಅದೇ ಸಂದೇಶ ಪ್ರತಿ ವಾಟ್ಸಪ್ ಗ್ರೂಪುಗಳಲ್ಲಿ ಇಂದು ಹಲವಾರು ಬಾರಿ ಪುನರಾವರ್ತನೆಯಾಗುತ್ತಿತ್ತು.

ವಾಸ್ತವದಲ್ಲಿ ಇದೊಂದು  ವೈರಸ್ ರೂಪವಾಗಿದ್ದು, ಇದನ್ನು ಒತ್ತಿದವರ ಮೊಬೈಲ್ ಹಾಗೂ ವಾಟ್ಸಪ್ ಕೆಲ ಕಾಲ ಸ್ಥಗಿತಗೊಳ್ಳುತ್ತಿತ್ತು. ಪಿಂಕ್ ವಾಟ್ಸಪ್ ಅನ್ನೋದು ಮೋಡ್ ವಾಟ್ಸಪ್ ಮಾದರಿಯಲ್ಲಿ ಇರುವ ಆಪ್ ಆಗಿದ್ದು, ಅಧಿಕೃತ ವಾಟ್ಸಪ್ ಸಂಸ್ಥೆಯದ್ದು ಅಲ್ಲ. ಆದರೆ ಒಂದೇ ಮೊಬೈಲಿನಲ್ಲಿ ಎರಡು ವಾಟ್ಸಪ್ಪನ್ನು ಬಳಸುವವರಿಗೆ ಇದು ಸಹಕಾರಿಯಾಗುತ್ತದೆ ಎನ್ನಲಾಗಿದೆ. ಈ ಲಿಂಕನ್ನು ಒತ್ತದಂತೆ ಜನರನ್ನು ಎಚ್ಚರಿಸಲಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!