ಬೆಂಗಳೂರು: ಕೆಎಸ್ಆರ್ಟಿಸಿ ನೌಕರರಿಗೆ ಸಮವಸ್ತ್ರ ನೀಡಲಾಗುತ್ತಿದೆ, ನಮಗೆ ಯಾಕೆ ನೀಡುತ್ತಿಲ್ಲ? ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನಾ ಎಂದು ಪ್ರಶ್ನಿಸುತ್ತಿರುವ ಬಿಎಂಟಿಸಿ ನೌಕರರು, ನಮಗೂ ಸಮವಸ್ತ್ರ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬಿಎಂಟಿಸಿಯ ಕಂಡಕ್ಟರ್ ಡ್ರೈವರ್ ಹಾಗೂ ಮೆಕ್ಯಾನಿಕ್ಗಳಿಗೆ ಯೂನಿಫಾರಂ ಶೂ ನೀಡಿ ಎಂದು ಸಾರಿಗೆ ಮುಖಂಡರು ಮೆಜೆಸ್ಟಿಕ್ ಬಸ್ಗಳಲ್ಲಿ ಹತ್ತಿ ಭಿತ್ತಿಪತ್ರ ಅಭಿಯಾನ ಆರಂಭಿಸಿದ್ದಾರೆ.
ನಮಗೆ ಡ್ಯೂಟಿ ಮಾಡಲು ಯೂನಿಫಾರಂ ಕೊಡಿ ಎಂದು ಕಾಂಗ್ರೆಸ್ ಸರ್ಕಾರದ ಬಳಿ ಮನವಿ ಮಾಡುತ್ತಿರುವ ಬಿಎಂಟಿಸಿ ನೌಕರರು, ದಯವಿಟ್ಟು ಡ್ಯೂಟಿ ಮಾಡಲು ನಮಗೂ ಯೂನಿಫಾರಂ ಮತ್ತು ಶೂ ನೀಡಿ, ಕಳೆದ ಮೂರು ವರ್ಷಗಳಿಂದ ಯೂನಿಫಾರಂ, ಐದು ವರ್ಷದಿಂದ ಶೂ ನೀಡಿಲ್ಲ. ಹರಿದ ಬಟ್ಟೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.
ಹರಿದ ಚಪ್ಪಲಿ ಹಾಕಿಕೊಂಡು ಚಾಲಕರು ಬಸ್ ಚಾಲನೆ ಮಾಡುತ್ತಿದ್ದು, ಚಪ್ಪಲಿ ಹಾಕಿಕೊಂಡು ಬ್ರೇಕ್ ಹಾಕಲು ಆಗುವುದಿಲ್ಲ, ಶೂ ನೀಡಿ ಐದು ವರ್ಷವಾಯಿತು. ಯೂನಿಫಾರಂ ಕೊಟ್ಟು ಮೂರು ವರ್ಷವಾಗಿದೆ. ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ಬಿಎಂಟಿಸಿ ಕಂಡಕ್ಟರ್ ಡ್ರೈವರ್ ಹಾಗೂ ಮೆಕ್ಯಾನಿಕ್ಗಳಿಗೆ ನಿಗಮ ಯೂನಿಫಾರಂ ಕೊಡುತ್ತಿತ್ತು. ಅದನ್ನು ಸ್ಟೀಚ್ ಮಾಡಿಸಿಕೊಳ್ಳಲು ಹಣ ನೀಡುತ್ತಿತ್ತು ಅಥವಾ ಯೂನಿಫಾರಂ ಖರೀದಿಸಲು ಹಣ ನೀಡುತ್ತಿತ್ತು.
ಆದರೆ ಕಳೆದ ಮೂರು ವರ್ಷಗಳಿಂದ ಸಮವಸ್ತ್ರ ಕೊಟ್ಟಿಲ್ಲ. ಮತ್ತೊಂದು ಕಂಡಕ್ಟರ್ ಡ್ರೈವರ್ಗಳಿಗೆ ಶೂಗಾಗಿ ಪ್ರತಿವರ್ಷ 550 ರೂಪಾಯಿ ಹಣ ನೀಡುತ್ತಿದ್ದರು. ಆದರೆ ಕಳೆದ ಐದು ವರ್ಷಗಳಿಂದ ಶೂಗಾಗಿ ಹಣ ನೀಡಿಲ್ಲ. ಕಂಡಕ್ಟರ್ ಡ್ರೈವರ್ಗಳು ಚಪ್ಪಲಿ ಹಾಕಿಕೊಂಡು ಡ್ಯೂಟಿ ಮಾಡುತ್ತಿದ್ದಾರೆ ಎಂದು ಬಿಎಂಟಿಸಿ ಮುಖಂಡರು ಹೇಳುತ್ತಿದ್ದಾರೆ.
ಬಿಎಂಟಿಸಿಯಲ್ಲಿ ಒಟ್ಟು- 31 ಸಾವಿರ ನೌಕರರಿದ್ದು ಅದರಲ್ಲಿ ಕಂಡಕ್ಟರ್ ಡ್ರೈವರ್ ಮೆಕಾನಿಕಲ್ ಸೇರಿ ಒಟ್ಟು 2800 ನೌಕರರಿದ್ದಾರೆ.