ಡಿವೈಡರ್‌ಗೆ ಡಿಕ್ಕಿಯಾಗಿ BMTC ಬಸ್ ಪಲ್ಟಿ

Prasthutha|

- Advertisement -

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ವೋಲ್ವೋ ಬಸ್ ಪಲ್ಟಿಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಚ್‍ ಎಸ್‍ ಆರ್ ಲೇಔಟ್ ಕಡೆ ಬಿಎಂಟಿಸಿ ವೋಲ್ವೋ ಬಸ್ ಬರುತ್ತಿತ್ತು. ಆದರೆ ಪ್ಯಾಲೇಸ್ ಗುಟ್ಟಹಳ್ಳಿ ಫ್ಲೈಓವರ್ ಹತ್ತುವಾಗ ಬಸ್ ಪಲ್ಟಿಯಾಗಿದೆ.

- Advertisement -

ಚಾಲಕನಿಗೆ ತಲೆ ಸುತ್ತು ಬಂದ ಕಾರಣ ಬಸ್ ನಿಯಂತ್ರಣ ಕಳೆದು ಕೊಂಡಿದೆ. ಬಸ್ ಸೈಡ್ ಗೆ ಹಾಕುವಷ್ಟರಲ್ಲಿ ಡಿವೈಡರ್ ಗೆ ಹೊಡೆದು ಪಲ್ಟಿಯಾಗಿದೆ. ಅವಘಡದ ವೇಳೆ ಚಾಲಕ ನಿರ್ವಾಹಕ ಸೇರಿ 13 ಮಂದಿ ಬಸ್ಸಿನಲ್ಲಿದ್ದರು. ಘಟನೆಯಿಂದ ಬಸ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Join Whatsapp