ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಅಧ್ಯಕ್ಷರಾಗಿ ಸಿದ್ದೀಕ್ ಮಂಜೇಶ್ವರ ಆಯ್ಕೆ

Prasthutha|

ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಅಧ್ಯಕ್ಷರಾಗಿ ಸಿದ್ಧಿಕ್ ಮಂಜೇಶ್ವರ ಆಯ್ಕೆಯಾಗಿದ್ದಾರೆ. ಸಂಸ್ಥೆಯ ವಾರ್ಷಿಕ ಮಹಾಸಭೆಯು ದಿನಾಂಕ 1/3/2021 ರಂದು ಉಳ್ಳಾಲ ಸಯ್ಯದ್ ಮದನಿ ಸಭಾಂಗಣದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಿದ್ದೀಖ್ ಮಂಜೇಶ್ವರ ಇವರ ನೇತೃತ್ವದಲ್ಲಿ ಜರುಗಿತು.

- Advertisement -

ನೂತನ ಸಮಿತಿಯ ಅಧ್ಯಕ್ಷರಾಗಿ ಸಿದ್ಧಿಕ್ ಮಂಜೇಶ್ವರ ಉಪಾಧ್ಯಕ್ಷರಾಗಿ ಅಶ್ರಫ್ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಕಲ್ಲರಕೋಡಿ, ಕಾರ್ಯದರ್ಶಿಯಾಗಿ ರಝಾಕ್ ಸಾಲ್ಮರ, ಜೊತೆ ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಕಾಶಿಪಟ್ನ, ಕೋಶಾಧಿಕಾರಿಯಾಗಿ ಹಮೀದ್ ಪಜೀರ್ ನೇಮಕಗೊಂಡರು.

ಸಮಿತಿ ಸದಸ್ಯರಾಗಿ ಸಲಾಂ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಫಾರೂಕ್ ಜ್ಯೂಸ್ ರೋಮ್ಯಾಂಟಿಕ್, ಫಾರೂಕ್ ಬಿಗ್ ಗ್ಯಾರೇಜ್, ಮೊಯ್ದು ಸೀತಂಗೊಳಿ, ಫಯಾಝ್ ಮಾಡೂರು, ಫಯಾಝ್ ಮೊಂಟೆಪದವು, ತೌಫಿಕ್ ಕುಲಾಯಿ, ಇಮ್ರಾನ್ ಉಪ್ಪಿನಂಗಡಿ, ದಾವೂದ್ ಬಜಾಲ್ ಆಯ್ಕೆಯಾದರು.

- Advertisement -

ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಮಾಧ್ಯಮ ಸಲಹೆಗಾರರಾಗಿ ನಿಜಾಮುದ್ದೀನ್ ಉಪ್ಪಿನಂಗಡಿ, ಶಿಬಿರ ಉಸ್ತುವಾರಿಯಾಗಿ ರವೂಫ್ ಪಾಲ್ತಾಡ್, ಇಮ್ತಿಯಾಜ್ ಜೋಕಟ್ಟೆ, ಹನೀಫ್ ಮುಡಿಪು, ವೈದ್ಯಕೀಯ ಸಲಹೆಗಾರರಾಗಿ ಸಮೀರ್ ನಾರಾವಿ, ಮತ್ತು ಕಾನೂನು ಸಲಹೆಗಾರರಾಗಿ ಹಕೀಂ ಕೆ.ಸಿ ರೋಡ್ ಆಯ್ಕೆಗೊಂಡರು.

ಉಳಿದಂತೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಅನಿವಾಸಿ ಸಮಿತಿಯಲ್ಲಿ, ಯುಎಇ ಘಟಕದ ಅಧ್ಯಕ್ಷರಾಗಿ ನಝೀರ್ ಬಿಕರ್ಣಕಟ್ಟೆ, ಸೌದಿ ಅರೇಬಿಯಾ ಘಟಕದ ಅಧ್ಯಕ್ಷರಾಗಿ ಇಮ್ಮು ಉಲ್ಲಾಳ, ಬಹರೈನ್ ಘಟಕದ ಅಧ್ಯಕ್ಷರಾಗಿ ಫಾರೂಕ್ ಬಹರೈನ್, ಒಮಾನ್ ಘಟಕದ ಅಧ್ಯಕ್ಷರಾಗಿ ಹಫೀಝ್ ಒಮಾನ್ ಆಯ್ಕೆಯಾದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಸ್ಥಾಪಕರಾದ ಸಿದ್ದೀಕ್ ಮಂಜೇಶ್ವರ ಮಾತನಾಡಿ ನಮ್ಮ ಸಂಸ್ಥೆಯು ಎಲ್ಲಾ ವರ್ಗದ ಜನರಿಗೆ ವೈದ್ಯಕೀಯ ನೆರವು, ರಕ್ತದಾನ ಮತ್ತು ಇತರೆ ಸೇವೆಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದು ನಿಮ್ಮೆಲ್ಲರ ಸಹಕಾರದೊಂದಿಗೆ ಈ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ, ನಿಮ್ಮ ಈ ನಿಸ್ವಾರ್ಥ ಸೇವೆಯನ್ನು ಭಗವಂತನು ಸ್ವೀಕರಿಸಲಿ ಎಂದು ಹಾರೈಸಿದರು.

2020 21 ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿಯಾದ ನವಾಝ್ ಕಲ್ಲರಕೋಡಿ ವಾಚಿಸಿ ಮಂಡಿಸಿದರು.

ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರಿನ ಕಾರ್ಯನಿರ್ವಾಹಕ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ಕಾರ್ಯಕ್ರಮವನ್ನು ರಝಾಕ್ ಸಾಲ್ಮರ ನಿರೂಪಿಸಿ, ಶಾಹುಲ್ ಹಮೀದ್ ಕಾಶಿಪಟ್ನ ಸ್ವಾಗತಿಸಿ, ಹಮೀದ್ ಪಜೀರ್ ವಂದಿಸಿದರು.

Join Whatsapp