ಪಿಎಫ್ಐ ಬ್ಲಡ್ ಡೋನರ್ಸ್ ಫೋರಂನಿಂದ ರಕ್ತದಾನ ಶಿಬಿರ

Prasthutha|

ಮಂಗಳೂರು: ನಾವೂರು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಜುಲೈ 4ರಂದು ಇಲ್ಲಿನ ಫರ್ಲಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

- Advertisement -


ಸಭೆಯ ಅಧ್ಯಕ್ಷತೆಯನ್ನು ಸಾದಿಕ್ ಮೈಂದಾಳ ವಹಿಸಿದ್ದರು. ಪಿ ಎಫ್ ಐ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ಇಮ್ತಿಯಾಝ್ ತುಂಬೆ ಪ್ರಾಸ್ತಾವಿಕ ಮಾತನಾಡಿ, ಎಲ್ಲಾ ದಾನಗಳಲ್ಲಿ ಶ್ರೇಷ್ಟ ದಾನ ರಕ್ತದಾನವಾಗಿದೆ. ರಕ್ತದಾನದ ಮೂಲಕ ಮತ್ತೊಂದು ಜೀವವನ್ನು ಉಳಿಸುವ ಪುಣ್ಯ ಕಾರ್ಯವಾಗಿದೆ ಎಂದರು.


ನಾವೂರ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಕುಲಾಲ್, ಸೈಂತ ಜೇಕಬ್ ಶಾಲೆಯ ಮುಖ್ಯೋಪಾಧ್ಯಾಯಿನಿ ಜೆಸಿಂತಾ ಟೀಚರ್, ಸ್ಥಳೀಯ ಬಿಜೆಎಮ್ ಮಸೀದಿಯ ಖತೀಬರಾದ ಸ್ವಾದಿಕ್ ಅಝ್ಹರಿ, ಪಿ ಎಫ್ ಐ ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಮ್ ಕುಂಪನಮಜಲು, ಅಝೀಝ್ ಸಅದಿ ಮುಂತಾದವರು ರಕ್ತದಾನ ಮಹತ್ವದ ಕುರಿತು ಮಾತನಾಡಿದರು‌. ರಝಾಕ್ ಅಗ್ರಹಾರ ಸ್ವಾಗತಿಸಿದರು.
ಶಿಬಿರದಲ್ಲಿ 75 ದಾನಿಗಳು ರಕ್ತ ದಾನ ಮಾಡಿದರು.



Join Whatsapp