ಗುಡ್ಡೆಅಂಗಡಿಯಲ್ಲಿ ರಕ್ತದಾನ ಶಿಬಿರ

Prasthutha|

ಬಂಟ್ವಾಳ : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಮೆಲ್ಕಾರ್ ಹಾಗೂ ಭಾಯ್-ಜಾನ್ ಫ್ರೆಂಡ್ಸ್ ಗುಡ್ಡೆಅಂಗಡಿ ವತಿಯಿಂದ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಗುಡ್ಡೆಅಂಗಡಿ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು 125 ಮಂದಿ ರಕ್ತದಾನಿಗಳಿಂದ 116 ಯೂನಿಟ್ ರಕ್ತ ಸಂಗ್ರಹವಾಗಿದೆ.


ಈ ಕಾರ್ಯಕ್ರಮವನ್ನು ಸ್ಥಳೀಯ ನೂರುದ್ದೀನ್ ಜುಮಾ ಮಸೀದಿಯ ಖತೀಬ್ ರಶೀದ್ ಯಮಾನಿ ಪರಪ್ಪು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಮೆಲ್ಕಾರ್ ಇದರ ಕಾರ್ಯದರ್ಶಿ ರಫೀಕ್ ಕೊಚ್ಚಿ ಗುಡ್ಡೆಅಂಗಡಿ ವಹಿಸಿದ್ದರು.

- Advertisement -


ಮುಖ್ಯ ಅತಿಥಿಯಾಗಿ ಮಸೀದಿಯ ಅಧ್ಯಕ್ಷರಾದ ಹಾಜಿ|ಮುಹಮ್ಮದ್, ಮುಖಂಡರಾದ ಹಾಜಿ ಮುಹಮ್ಮದ್ ನೀಮಾ, ಹಸನಾಕ ಗುಡ್ಡೆಅಂಗಡಿ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಮೆಲ್ಕಾರ್ ಇದರ ಅಧ್ಯಕ್ಷ ಬಶೀರ್ ಬೊಳ್ಳಾಯಿ, ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಕರಾದ ಪ್ರವೀಣ್ ಉಪಸ್ಥಿತರಿದ್ದರು. ಶಹೀದ್ ಗುಡ್ಡೆಅಂಗಡಿ ನಿರೂಪಿಸಿದರು, ಅತಾವುಲ್ಲಾ ನಾಸೀರ್ ವಂದಿಸಿದರು.

- Advertisement -