ಮಧ್ಯರಾತ್ರಿ 1 ಗಂಟೆಗೆ ಯುವಕರಿಂದ ರಕ್ತದಾನ | ಬ್ಲಡ್ ಡೋನರ್ಸ್ ಮಂಗಳೂರು ಸದಸ್ಯರ ಕಾರ್ಯಕ್ಕೆ ಶ್ಲಾಘನೆ

Prasthutha|

ಮಂಗಳೂರು :  ನಗರದ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರಿಗೆ ತುರ್ತು ರಕ್ತದ ಅವಶ್ಯಕತೆ ಇದ್ದಾಗ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಸದಸ್ಯರು ಮಧ್ಯರಾತ್ರಿ 1 ಗಂಟೆಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.  

ಯದುನಂದನ್ ಎಂಬವರಿಗೆ ತುರ್ತು ರಕ್ತದ ಅಗತ್ಯವಿತ್ತು. ಈ ವಿಷಯ 12:30ರ ಸುಮಾರಿಗೆ ಬ್ಲಡ್ ಡೋನರ್ಸ್ ಸಂಸ್ಥೆಗೆ ಮಾಹಿತಿ ಲಭಿಸಿತು. ಕೂಡಲೇ ಸಂಸ್ಥೆಯ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ ರಕ್ತದ ಅತೀವ ಅಗತ್ಯತೆಯನ್ನು ಮನಗಂಡು ತಂಡದ ಸಹ ಕಾರ್ಯನಿರ್ವಾಹಕರಾದ ಫಾರೂಕ್ ಜ್ಯೂಸ್ ರೋಮ್ಯಾಂಟಿಕ್, ರಝಾಕ್ ಸಾಲ್ಮರ ಇವರನ್ನು ಒಟ್ಟುಗೂಡಿಸಿ ಆಸ್ಪತ್ರೆಗೆ ಭೇಟಿ ನೀಡಿದರು.

- Advertisement -

ವೈದ್ಯರು ರಾತ್ರಿ ಸರಿಸುಮಾರು ಒಂದು ಗಂಟೆಗೆ ಸರಿಯಾಗಿ ರೋಗಿಗೆ ಓಪನ್ ಹಾರ್ಟ್ ಶಸ್ತ್ರ ಚಿಕಿತ್ಸೆ ನಡೆಯಲಿರುವುದರ ಬಗ್ಗೆ ಮಾಹಿತಿ ನೀಡಿದರು. ಇದಕ್ಕಾಗಿ ರಕ್ತದ ತುರ್ತು ಅಗತ್ಯತೆಯನ್ನು ವಿವರಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಬ್ಲಡ್ ಡೋನರ್ಸ್ ಸಂಸ್ಥೆ, ಸಂಸ್ಥೆಯ ಸದಸ್ಯರಾದ ಇಬ್ರಾಹಿಂ ಅಮೀರ್ ಕೆ.ಸಿ. ರೋಡ್, ಶಬೀರ್ ತಲಪಾಡಿ, ಹಮೀದ್ ಕಲ್ಲರಕೋಡಿ ಇವರನ್ನು ಸಂಪರ್ಕಿಸಿ ರಕ್ತದಾನ ಮಾಡುವಂತೆ ಮನವಿ ಮಾಡಿದರು.

ಮನವಿಗೆ ಒಪ್ಪಿಕೊಂಡ ಸದಸ್ಯರನ್ನು ಕರೆದುಕೊಂಡು ಬಂದು ರಕ್ತದಾನ ಮಾಡಿಸಲಾಗಿದೆ. ಮಧ್ಯರಾತ್ರಿ 1 ಗಂಟೆ ವೇಳೆಗೆ ಕಾರ್ಯ ನಿರ್ವಹಿಸಿ ರಕ್ತದಾನ ಮಾಡಿರುವ ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇದೊಂದು ಕೋಮು ಸೌಹಾರ್ಧತೆಗೆ ಸಾಕ್ಷಿಯಾದ ಘಟನೆಯೆಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

- Advertisement -