ಸೇನಾ ಹೆಲಿಕಾಪ್ಟರ್ ದುರಂತ : ತೀವ್ರ ಶೋಧದ ಬಳಿಕ ಹೆಲಿಕಾಪ್ಟರ್ ‘ಬ್ಲ್ಯಾಕ್ ಬಾಕ್ಸ್’ ಪತ್ತೆ

Prasthutha|

ತಮಿಳುನಾಡು: ಭಾರತೀಯ ಸೇನಾ ಕಮಾಂಡರ್ ಬಿಪಿನ್ ರಾವತ್ ಸಹಿತ ೧೪ ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ ೧೩ ಮಂದಿ ಸಾವಿಗೀಡಾಗಿ, ಓರ್ವ ಯೋಧ ಗಂಭೀರ ಗಾಯಗೊಂಡಿದ್ದರು. ಇದೀಗ ದುರ್ಘಟನೆ ನಡೆದ ಸ್ಥಳದಲ್ಲಿದ್ದ ‘ಬ್ಲ್ಯಾಕ್ ಬಾಕ್ಸ್’ ಅನ್ನು ತೀವ್ರ ಶೋಧ ಕಾರ್ಯ ನಡೆಸಿ ವಾಯು ಸೇನೆಯಾ ತನಿಖಾ ತಂಡದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

- Advertisement -

ಪತನಗೊಂಡ ವಾಯುಸೇನೆಯ  MI -17V5 ಹೆಲಿಕಾಪ್ಟರ್ ನ ಬ್ಲ್ಯಾಕ್ ಬಾಕ್ಸ್’ ಪತ್ತೆಯಾಗಿದ್ದು,  ದುರಂತದ ಬಗೆಗಿನ ನಿಖರ ಮಾಹಿತಿಯನ್ನು ಬ್ಲ್ಯಾಕ್ ಬಾಕ್ಸ್’ ನೀಡಬಲ್ಲದು ಎನ್ನಲಾಗಿದೆ.  

Join Whatsapp