ನಮ್ಮದೇ ನಿಜವಾದ ‘ಕಾಂಗ್ರೆಸ್’ ಎಂದ ಟಿಎಂಸಿ । ರಾಷ್ಟ್ರ ಮಟ್ಟದಲ್ಲಿ ಟಿಎಂಸಿ ತನ್ನ ಬಂಡವಾಳ ತೋರಲಿ ಕಾಂಗ್ರೆಸ್ ಸವಾಲು

Prasthutha|

ಪಶ್ಚಿಮ ಬಂಗಾಳ: ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ತೃಣಮೂಲ ಕಾಂಗ್ರೆಸ್ , ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಎದುರು ಕಾಂಗ್ರೆಸ್‌ ವಿರೋಧ ಪಕ್ಷದ ಜವಾಬ್ದಾರಿ ನಿಭಾಯಿಸಲು ವಿಫಲವಾಗಿದೆ, ಹೀಗಾಗಿ ನಮ್ಮಲ್ಲಿರುವ ಕಾಂಗ್ರೆಸ್ಸೇ ನಿಜವಾದ ಕಾಂಗ್ರೆಸ್ ಎಂದು ಹೇಳಿದೆ. ತನ್ನ ಮುಖವಾಣಿ ‘ಜಾಗೋ ಬಾಂಗ್ಲಾ’ದಲ್ಲಿ ಬರೆದಿರುವ ಟಿಎಂಸಿ , ಬಿಜೆಪಿ ವಿರುದ್ದ ನಾವು ಹೋರಾಟ ನಡೆಸಲು ಶಕ್ತವಾಗಿದ್ದೇವೆ ಎಂದು ಹೇಳಿದೆ.

- Advertisement -

‘ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಲು ಅಸಮರ್ಥವಾಗಿದೆ , ಕೇಂದ್ರದಲ್ಲಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಬಿಜೆಪಿಯ ಹುನ್ನಾರಗಳನ್ನು ತಡೆಯ ಬೇಕಿತ್ತು. ಆದರೆ, ಕಲಹ, ಗುಂಪುಗಾರಿಕೆಯಿಂದ ಬೇಸತ್ತು, ಅಸಡ್ಡೆಯನ್ನು ಮೈಗೂಡಿಸಿಕೊಂಡಿಕೊಂಡು ಅದು ಕುಗ್ಗಿಹೋಗಿದೆ. ಆದರೆ ಸಮಯ ಯಾರಿಗೂ ಕಾಯುವುದಿಲ್ಲ, ಯಾರಾದರೂ ಮುಂದೆ ಬರಬೇಕು. ಟಿಎಂಸಿ ಆ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದೆ. ಟಿಎಂಸಿಯೇ ನಿಜವಾದ ಕಾಂಗ್ರೆಸ್’ ಎಂದು ಹೇಳಿದೆ.


ಟಿಎಂಸಿಯು ಎಲ್ಲರನ್ನೂ ಒಗ್ಗೂಡಿಸಿ, ಒಗ್ಗಟ್ಟಿನ ಮೈತ್ರಿಕೂಟವನ್ನು ರಚಿಸಲು ಎಂದಿಗೂ ಬಯಸುತ್ತದೆ ಎಂದು ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.

- Advertisement -

►ರಾಷ್ಟ್ರ ಮಟ್ಟದಲ್ಲಿ ಟಿಎಂಸಿ ತನ್ನ ಬಂಡವಾಳ ತೋರಲಿ’ ಕಾಂಗ್ರೆಸ್ ಸವಾಲು

ಆದರೆ ಈ ಬಗ್ಗೆ ತಿರುಗೇಟು ನೀಡಿರುವ ಕಾಂಗ್ರೆಸ್‌, ‘ರಾಷ್ಟ್ರ ಮಟ್ಟದಲ್ಲಿ ಟಿಎಂಸಿಯು ತನ್ನ ಬಂಡವಾಳ ತೋರ್ಪಡಿಸಲಿ ಎಂದು ಸವಾಲು ಎಸೆದಿದೆ. ಅಲ್ಲದೆ, ‘ಟಿಎಂಸಿಯು ಬಿಜೆಪಿಯ ಕೈಗೊಂಬೆ’ ಎಂದು ಹೇಳಿದೆ. ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ಎಂದು ಕಾಂಗ್ರೆಸ್ ನಾಯಕ ಶುವಾಂಕರ್ ಸರ್ಕಾರ್ ಸವಾಲು ಹಾಕಿದ್ದಾರೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನ್ನ ನಾಯಕರನ್ನು ರಕ್ಷಿಸಿಕೊಳ್ಳಲು ಬಿಜೆಪಿಯೊಂದಿಗೆ ಟಿಎಂಸಿ ಕೈಜೋಡಿಸಿದೆ. ಈ ನಂಟು ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ,‘ ಎಂದು ಶುವಾಂಕರ್ ಹರಿಹಾಯ್ದಿದ್ದಾರೆ.

Join Whatsapp