ಪಕ್ಷದೊಳಗೆ ಬಿಜೆಪಿಯ ‘ಸ್ಲೀಪರ್ ಸೆಲ್’ಗಳು ನುಸುಳಿವೆ: ಕಾಂಗ್ರೆಸ್ ಮುಖಂಡ

Prasthutha|

ಡೆಹ್ರಾಡೂನ್: ಪಕ್ಷದೊಳಗೆ ಬಿಜೆಪಿಯ ‘ಸ್ಲೀಪರ್ ಸೆಲ್’ಗಳು ನುಸುಳಿಕೊಂಡಿದ್ದಾರೆ. ಎಲ್ಲ ರೀತಿಯಲ್ಲೂ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಉತ್ತರಾಖಂಡ ಕಾಂಗ್ರೆಸ್ ಮುಖ್ಯಸ್ಥ ಕರಣ್ ಮಹರಾ ಆರೋಪಿಸಿದ್ದಾರೆ.

- Advertisement -

ಯಾರಾದರೂ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ ಅಂದರೆ ಅವರು ಬಿಜೆಪಿಯ ಸಹವಾಸದಲ್ಲಿದ್ದಾರೆ ಎಂದರ್ಥ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಸ್ಲೀಪರ್ ಸೆಲ್’ಗಳು ಕಾಂಗ್ರೆಸ್ ಪಕ್ಷದೊಳಗೆ ಸೇರಿಕೊಂಡಿರುವ ಬಿಜೆಪಿಯ ಜನ. ಅವರು ಬಿಜೆಪಿ ಬೆಂಬಲಿಗರು. ಅವರು ಕಾಂಗ್ರೆಸ್ ನಾಯಕರನ್ನು ವಿರೋಧಿಸುತ್ತಾರೆ. ಹಗಲು ಹೊತ್ತಿನಲ್ಲಿ ಕಾಂಗ್ರೆಸ್  ಕಚೇರಿಯಲ್ಲಿ ಇರುತ್ತಾರೆ ಮತ್ತು ರಾತ್ರಿ ಬಿಜೆಪಿ ನಾಯಕ ಮನೆಯಲ್ಲಿ ಇರುತ್ತಾರೆ ಎಂದು ಮಹರಾ ಹೇಳಿದ್ದಾರೆ.



Join Whatsapp