ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ್ತಿ ಪ್ರಾರ್ಥನಾ ಸಾಳ್ವೆ ಆತ್ಮಹತ್ಯೆ

Prasthutha|

ಭೋಪಾಲ್: ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್ ಆಟಗಾರ್ತಿ ಪ್ರಾರ್ಥನಾ ಸಾಳ್ವೆ ಅಣೆಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಬೈತುಲ್’ ಎಂಬಲ್ಲಿ ನಡೆದಿದೆ.

- Advertisement -

17 ವರ್ಷದ ಪ್ರಾರ್ಥನಾ ಸಾಳ್ವೆ ತನ್ನ ಸಹೋದರನ ಸಾವಿನ ಆಘಾತದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಎರಡು ಗಂಟೆಗಳ ಶೋಧ ಕಾರ್ಯಾಚರಣೆಯ ನಂತರ ಪ್ರಾರ್ಥನಾ ಸಾಳ್ವೆ ಅವರ ಮೃತದೇಹವನ್ನು ಗೃಹರಕ್ಷಕ ದಳದ ಸಿಬ್ಬಂದಿ ಗುರುವಾರ ಅಣೆಕಟ್ಟಿನ ನೀರಿನಿಂದ ಹೊರತೆಗೆದಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಪ್ರಾರ್ಥನಾ ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಪ್ರಾರ್ಥನಾ, ಏಳು ತಿಂಗಳ ಹಿಂದೆ ಇಂದೋರ್’ನಲ್ಲಿ ನಡೆದ ಅಹಿತಕರ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದ ಅವರ ಸಹೋದರನ ಸಾವಿನ ನಂತರ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

Join Whatsapp