ಪಾಕಿಸ್ತಾನದ ವಾಯು ದಾರಿ ಬಳಸಿ ಅಮೆರಿಕಕ್ಕೆ ಪ್ರಯಾಣಿಸಿದ ಪ್ರಧಾನಿ ಮೋದಿ

Prasthutha|


2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರದ 370ನೇ ವಿಧಿಯನ್ನು ರದ್ದು ಪಡಿಸಿದ್ದಕ್ಕೆ ಪ್ರತಿಭಟಿಸಿ ಪಾಕಿಸ್ತಾನವು ಭಾರತದ ವಿಮಾನಗಳಿಗೆ ತನ್ನ ವಾಯು ಮಾರ್ಗಗಳನ್ನು ಮುಚ್ಚಿತ್ತು. ಹಾಗಾಗಿ ಆಗ ವಿದೇಶಕ್ಕೆ ಹೊರಟಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ಮೋದಿಯವರು ಸುತ್ತು ಬಳಸಿ ಅಫ್ಘಾನಿಸ್ತಾನದ ಕಡೆಯಿಂದ ಹೋಗಿದ್ದರು.


ಕಾಲ ಈಗ ಬದಲಾಗಿದೆ. ಈಗ ಅಫ್ಘಾನಿಸ್ತಾನದ ಮೇಲೆ ಹೋಗುವುದು ಭದ್ರತೆಯ ದೃಷ್ಟಿಯಿಂದ ಒಳಿತಲ್ಲ ಎಂದು ಸಲಹೆ ಬಂದಿದೆ. ಅಲ್ಲದೆ ಅಫ್ಘಾನಿಸ್ತಾನದ ಹೊಸ ಸರಕಾರವು ಸದ್ಯ ಪಾಕಿಸ್ತಾನ ಕೆಲವು ದೇಶಗಳ ವಿಮಾನಗಳಿಗಷ್ಟೆ ಪ್ರವೇಶ ನೀಡಿದೆ. ಈ ನಿಟ್ಟಿನಲ್ಲಿ ಒಂದು ಮಾಹಿತಿ ಭಾರತ ಇನ್ನೂ ಪ್ರಯತ್ನಿಸಿಲ್ಲ ಎನ್ನುವುದಾಗಿದೆ. ಅಫ್ಘಾನಿಸ್ತಾನ ಅನುಮತಿ ನೀಡಿಲ್ಲ ಎಂದು ಹೇಳುವವರೂ ಇದ್ದಾರೆ.
ಅದೇನೇ ಇದ್ದರೂ ಮೋದಿ ಸರಕಾರವು ಪಾಕಿಸ್ತಾನಕ್ಕೆ ವಾಯು ದಾರಿ ಬಳಸಲು ಕೇಳಿಕೊಂಡಿತು ಹಾಗೂ ಇಮ್ರಾನ್ ಖಾನ್ ಸರಕಾರವು ಅದಕ್ಕೆ ಕೂಡಲೆ ಅನುಮತಿಯನ್ನೂ ನೀಡಿತು. ಹಾಗಾಗಿ ಮೋದಿಯವರ ವಿಶೇಷ ವಿಮಾನವು ಪಾಕಿಸ್ತಾನದ ಏರ್ ಸ್ಪೇಸ್ ಬಳಸಿಕೊಂಡು ಪಶ್ಚಿಮಕ್ಕೆ ಹೋಯಿತು.

- Advertisement -


ಮೋದಿಯವರು ಮೂರು ದಿನದ ಯುಎಸ್ ಎ ಪ್ರವಾಸದಲ್ಲಿದ್ದು, ಮುಖ್ಯವಾಗಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾಗವಹಿಸುವರು. ಕ್ವಾಡ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವರು ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಶ್ವೇತ ಭವನದಲ್ಲಿ ಅಮೆರಿಕಾಧ್ಯಕ್ಷ ಜೋ ಬೈಡನ್ ಅವರ ಜೊತೆ ಹಲವು ವಿಚಾರಗಳ ಬಗೆಗೆ ಚರ್ಚೆ ಮಾಡುವರು.

- Advertisement -