ಬಿಜೆಪಿಯ 3 ಸಿಲಿಂಡರ್, ನಾನು 5 ಸಿಲಿಂಡರ್ ಕೊಡುತ್ತೇನೆ: ಹೆಚ್’ಡಿಕೆ

Prasthutha|

ಮಂಡ್ಯ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 3 ಸಿಲಿಂಡರ್ ಕೊಡುತ್ತೇವೆ ಎಂದು ಹೇಳಿದೆ. ನಮ್ಮ ಸರ್ಕಾರ ಬಂದರೆ 5 ಸಿಲಿಂಡರ್ ಕೊಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

- Advertisement -


ಈ ಬಗ್ಗೆ ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಹೇಳಿದ ಮೇಲೆ ಬಿಜೆಪಿಯವರು ಹೇಳಿದ್ದಾರೆ. ಕೊಡುವುದಿದ್ದರೇ ಸರ್ಕಾರ ಇದ್ದಾಗಲೇ ಕೊಡಬೇಕಿತ್ತು ಎಂದರು.


ದೇವೇಗೌಡರು ಆರೋಗ್ಯದ ಸಮಸ್ಯೆ ನಡುವೆ ನನ್ನ ಏಕಾಂಗಿ ಹೋರಾಟವನ್ನು ಅವರು ಗಮನಿಸಿದ್ದಾರೆ. ನನ್ನ ಮೇಲೆ ಬಿದ್ದಿರುವ ಒತ್ತಡವನ್ನು ಕಡಿಮೆ ಮಾಡಲು 3-4 ದಿನಗಳಿಂದ ತಾವೂ ಓಡಾಡುತ್ತಿದ್ದಾರೆ. ವೈದ್ಯರು ಅವರಿಗೆ ವಿಶ್ರಾಂತಿ ಬೇಕು ಅಂದಿದ್ದರಿಂದ ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ಆದ್ರೆ ಮೈಸೂರಿನ ಪಂಚರತ್ನ ಸಮಾರೋಪದಲ್ಲಿ ಭಾಗಿಯಾಗಿ ಜನರನ್ನು ನೋಡಿದ ಮೇಲೆ ಅವರ ಆರೋಗ್ಯ ಸುಧಾರಿಸಿದೆ ಎಂದರು.