ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹತ್ಯೆಗೆ ಬಿಜೆಪಿ ಅಭ್ಯರ್ಥಿ ಸಂಚು: ಸುರ್ಜೇವಾಲಾ

Prasthutha|

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಹೆಂಡತಿ , ಮಕ್ಕಳ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದಾರೆ.

- Advertisement -


ಈಚೆಗೆ ರಾಜಸ್ತಾನದ ಶಾಸಕ ಮದನ್ ದಿಲಾವರ್, ಮಲ್ಲಿಕಾರ್ಜುನ ಖರ್ಗೆ ಅವರ ಸಾವು ಬಯಸಿದ್ದರು. ಈಗ ಅದೇ ಬಿಜೆಪಿಯ ಚಿತ್ತಾಪುರ ಅಭ್ಯರ್ಥಿ ಮಣಿಕಂಠ ರಾಠೋಡ್, ಖರ್ಗೆ ಮತ್ತು ಅವರ ಇಡೀ ಕುಟುಂಬ ಹತ್ಯೆಗೆ ಸಂಚು ರೂಪಿಸಿರುವುದು ಬಹಿರಂಗಗೊಂಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


ಇದು ಕೇವಲ ಖರ್ಗೆ ಅವರ ಮೇಲೆ ನಡೆಸುವ ಹಲ್ಲೆ ಅಲ್ಲ; ಇಡೀ ಕನ್ನಡಿಗರ ಸ್ವಾಭಿಮಾನ ಮತ್ತು ಅಸ್ಮಿತೆಯ ಕೊಲೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.