ಪ.ಬಂಗಾಳ; ಕೋಲ್ಕತ್ತಾದ ಕಾಶಿಪುರ್ ಪ್ರದೇಶದಲ್ಲಿ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತನ ಮೃತದೇಹವೊಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತರನ್ನು ಅರ್ಜುನ್ ಚೌರಾಸಿಯಾ (27) ಎಂದು ಪತ್ತೆಹಚ್ಚಿದ್ದು ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ. ಪೊಲೀಸರ ಪ್ರಕಾರ, ಅವರ ಶವ ಬಗಾನ್ ಪ್ರದೇಶದಲ್ಲಿ ಪಾಳುಬಿದ್ದ ಕಟ್ಟಡದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು ಈ ಕೃತ್ಯವನ್ನ ಟಿಎಂಸಿ ಕಾರ್ಯಕರ್ತರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಅಮಿತ್ ಶಾ ಬಂಗಾಳ ಪ್ರವಾಸದಲ್ಲಿದ್ದು, ಮೃತನ ನಿವಾಸಕ್ಕೆ ಸಂಜೆ ಅಮಿತ್ ಶಾ ಭೇಟಿ ನೀಡಲು ಮುಂದಾಗಿದ್ದಾರೆ