100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳ ಆರೋಪಿ ಮುತಾಲಿಕ್ ಜೊತೆ ಮಂಗಳೂರು ಪೊಲೀಸ್ ಕಮಿಷನರ್ : ನೆಟ್ಟಿಗರಿಂದ ವ್ಯಾಪಕ ಆಕ್ರೋಶ

Prasthutha|

ಮಂಗಳೂರು: ಸದಾ ಪ್ರಚೋದನಕಾರಿ ಭಾಷಣದ ಮೂಲಕ ಕೋಮು ಸಾಮರಸ್ಯ ಕೆಡಿಸುವ ಹಾಗೂ ಮಂಗಳೂರು ಪಬ್ ದಾಳಿ ಸೇರಿದಂತೆ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಪ್ರಮೋದ್ ಮುತಾಲಿಕ್ ರಿಗೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭರ್ಜರಿ ಆತಿಥ್ಯ ದೊರಕಿದೆ. ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -


100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಓರ್ವ ಕ್ರಿಮಿನಲ್ ನನ್ನು ಕಮಿಷನರ್ ತಮ್ಮ ಕಚೇರಿಯಲ್ಲಿ ಕೂರಿಸಿ ಮಾತುಕತೆ ನಡೆಸುವ ಔಚಿತ್ಯವೇನಿದೆ ಎಂದವರು ಪ್ರಶ್ನಿಸಿದ್ದಾರೆ. ಇದು ಸಾರ್ವಜನಿಕರಲ್ಲಿ ಪೊಲೀಸರ ಕುರಿತು ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಸದಾ ಕೋಮು ವಿಷ ಕಾರುತ್ತಾ ಸಮಾಜದ ಶಾಂತಿ ಕದಡಿ, ಕೋಮು ಗಲಭೆಗೆ ಕಾರಣವಾಗುವ ಮುತಾಲಿಕ್ ಅವರಿಗೆ ಮಂಗಳೂರು ಕಮಿಷನರ್ ಕಚೇರಿಯಲ್ಲಿ ನೀಡಿರುವ ರಾಜ ಮರ್ಯಾದೆ ನೀಡಿರುವುದು ಅಪಾಯಕಾರಿ ನಡೆಯಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Join Whatsapp