ಸೈಕಲ್ ಗಳ ಮೇಲೆ ಬುಲ್ಡೋಜರ್ ಹರಿಸಿ ವಿಜಯೋತ್ಸವ ಆಚರಿಸಿದ ಬಿಜೆಪಿ ಕಾರ್ಯಕರ್ತರು

Prasthutha|

►ಉತ್ತರಪ್ರದೇಶದಲ್ಲಿ ಹೀಗೊಂದು ವಿಕೃತಿ!

- Advertisement -

ಲಖ್ನೋ: ಉತ್ತರ ಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೈಕಲ್‌ಗಳ ಮೇಲೆ ಬುಲ್ಡೋಜರ್‌ ಹರಿಸಿ ವಿಜಯೋತ್ಸವ ಆಚರಿಸಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬಾದುಂಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಸೈಕಲ್‌ಗಳ ಮೇಲೆ ಬುಲ್ಡೋಜರ್‌ ಹರಿಸಿ ವಿಕೃತಿ ಮೆರೆದಿದ್ದಾರೆ.

ಯೋಗಿ ಬುಲ್ಡೋಜರ್ ಎಂಬ ಪದವನ್ನು ಚುನಾವಣಾ ಪ್ರಚಾರದ ಸಮಯದಲ್ಲಿ ಆಗಾಗ ಬಳಸುತ್ತಿದ್ದರು. ‘ಈ ಚುನಾವಣೆಯಲ್ಲಿ ಎಸ್‌ಪಿಯ ಸೈಕಲನ್ನು ಬುಲ್‌ಡೋಜರ್‌ ಮೂಲಕ ಧ್ವಂಸಗೊಳಿಸಲಿದ್ದೇವೆ’ ಎಂದು ಯೋಗಿ ಪ್ರಚಾರದ ಸಮಯದಲ್ಲಿ ಹೇಳುತ್ತಿದ್ದರು.

- Advertisement -

ಉತ್ತರ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡರೂ ಬಿಜೆಪಿಗೆ ಫಲಿತಾಂಶ ಅಷ್ಟೊಂದು ತೃಪ್ತಿ ಕೊಡಲಿಲ್ಲ. 2017ಕ್ಕೆ ಹೋಲಿಸಿದರೆ ಈ ಬಾರಿ ಪಕ್ಷ 57 ಸ್ಥಾನ ಕಳೆದುಕೊಂಡಿದೆ. 403 ಸ್ಥಾನಗಳ ಪೈಕಿ ಬಿಜೆಪಿ ಈ ಬಾರಿ 255 ಸ್ಥಾನಗಳನ್ನು ಪಡೆದಿದ್ದು, 2017ಕ್ಕಿಂತ ಈ ಬಾರಿ 57 ಸ್ಥಾನ ಕಡಿಮೆಯಾಗಿದೆ.

Join Whatsapp