ಮಣಿಪುರ: 60 ಶಾಸಕರ ಪೈಕಿ 48 ಮಂದಿ ಕೋಟ್ಯಾಧಿಪತಿಗಳು, 25 ಮಂದಿ ಕ್ರಿಮಿನಲ್’ಗಳು!

Prasthutha|

- Advertisement -

ಹೊಸದಿಲ್ಲಿ: ಮಣಿಪುರದ ನೂತನ ವಿಧಾನಸಭೆಯ 60 ಶಾಸಕರ ಪೈಕಿ 48 ಮಂದಿ ಕೋಟ್ಯಾಧಿಪತಿಗಳು ಎಂದು ಅಂಕಿ ಅಂಶದಿಂದ ಬಹಿರಂಗವಾಗಿದೆ.

ಜಯಗಳಿಸಿದ ಅಭ್ಯರ್ಥಿಗಳ ಸರಾಸರಿ ಆಸ್ತಿ 3.75 ಕೋಟಿ ರೂ. ಆಗಿದ್ದು, ಈ ಪೈಕಿ ಶೇ.23 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಶೇ.18ರಷ್ಟು ಮಂದಿಯ ಮೇಲೆ ಗಂಭೀರವಾದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ.

- Advertisement -

ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ 60 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಪರಿಶೀಲಿಸಿದ ಮಣಿಪುರ ಎಲೆಕ್ಷನ್ ವಾಚ್ ಆ್ಯಂಡ್ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಇದನ್ನು ಬಹಿರಂಗಪಡಿಸಿದೆ.

ಈ ಬಾರಿ ಬಿಜೆಪಿ 32, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 7, ಜನತಾ ದಳ (ಯುನೈಟೆಡ್) 6, ಕಾಂಗ್ರೆಸ್ 5, ನಾಗಾ ಪೀಪಲ್ಸ್ ಫ್ರಂಟ್ 5, ಪಕ್ಷೇತರ ಅಭ್ಯರ್ಥಿಗಳು 3 ಮತ್ತು ಕುಕ್ಕಿ ಪೀಪಲ್ಸ್ ಅಲೈಯನ್ಸ್ 2 ಸ್ಥಾನಗಳನ್ನು ಪಡೆದಿದೆ.

Join Whatsapp