ಕಾಂಗ್ರೆಸ್ ಕಚೇರಿ ಕಟ್ಟಡದ ಕಾವಲುಗಾರನ ಗರ್ಭಿಣಿ ಮಗಳ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು

Prasthutha|

ಅಹಮದಾಬಾದ್: ಲೋಕಸಭೆಯಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ವಿರುದ್ಧ ಗುಜರಾತ್‌ನ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಗುರಿಯಾಗಿರಿಸಿಕೊಂಡು ವಿಹೆಚ್ ಪಿ ಹಾಗೂ ಬಜರಂಗ ದಳ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

- Advertisement -

ಕಾಂಗ್ರೆಸ್ ಕಚೇರಿ ಇದ್ದ ಕಟ್ಟಡದ ಕಾವಲುಗಾರನ ಗರ್ಭಿಣಿ ಮಗಳ ಮೇಲೆ ಸಂಘಪರಿವಾರ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ಜೈ ಶ್ರೀರಾಮ್ ಘೋಷಣೆ ಕೂಗಿದ ಪ್ರತಿಭಟನಾ ನಿರತರು ರಾಹುಲ್ ಗಾಂಧಿ ಪೋಸ್ಟರ್, ಫೋಟೋಗಳ ಮೇಲೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆ ವೇಳೆ ಕಚೇರಿ ಕಟ್ಟಡದ ಕಾವಲುಗಾರನ ಗರ್ಭಿಣಿ ಮಗಳ ಮೇಲೂ ದಾಳಿಕೋರರು ಹಲ್ಲೆ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಕಟ್ಟಡದ ವಾಚ್‌ಮ್ಯಾನ್‌ ಇದ್ದರು ಮತ್ತು ಅವರ ಗರ್ಭಿಣಿ ಮಗಳ ಮೇಲೂ ಈ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅಂತಹವರನ್ನು ಹಿಂದೂಗಳೆಂದು ಎಂದಿಗೂ ಕರೆಯಲು ಸಾಧ್ಯವಿಲ್ಲ. ಈ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕ ಅಮಿತ್ ಚಾವ್ಡಾ ಹೇಳಿದ್ದಾರೆ.



Join Whatsapp