ಮಧ್ಯಪ್ರದೇಶ | ಮುಸ್ಲಿಮ್ ಎಂದು ಭಾವಿಸಿ ಮಾನಸಿಕ ಅಸ್ವಸ್ಥನ ಹತ್ಯೆ; ಬಿಜೆಪಿ ಮುಖಂಡನ ಬಂಧನ

Prasthutha|

ಭೋಪಾಲ್: ಮಧ್ಯಪ್ರದೇಶದ ನೀಮುಚ್ ಎಂಬಲ್ಲಿ ಮುಸ್ಲಿಮ್ ಎಂದು ಭಾವಿಸಿ ಭವರ್ ಲಾಲ್ ಜೈನ್ ಎಂಬ ಮಾನಸಿಕ ಅಸ್ವಸ್ಥನನ್ನು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಮಾನಸಿಕ ಅಸ್ವಸ್ಥ ಮುಸ್ಲಿಮ್ ಎಂದು ಭಾವಿಸಿ, ಹೆಸರು ಕೇಳುತ್ತಾ ವೃದ್ಧನ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಬಿಜೆಪಿ ಮುಖಂಡನ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಜೈನ್ ಸಾವನ್ನಪ್ಪಿದ್ದು, ಬಿಜೆಪಿಯ ಮಾಜಿ ಕೌನ್ಸಿಲರ್ ಬೀನಾ ಖುಷ್ವಾಹಾ ಅವರ ಪತಿ ದಿನೇಶ್ ಖುಷ್ವಾಹ ಎಂಬಾತ ಮಾನಸಿಕ ಅಸ್ವಸ್ಥ ಜೈಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಮಧ್ಯೆ ನಿನ್ನ ಹೇಸರೇನು? ನೀನು ಮುಹಮ್ಮದ್ ಅಲ್ಲವೇ? ಎಂದು ಪ್ರಶ್ನಿಸುತ್ತಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ದಿನೇಶ್ ಸಂತ್ರಸ್ತ ಜೈನ್ ಎಂಬಾತನ ಬಳಿ ಪದೇ ಪದೇ ಆಧಾರ್ ಕಾರ್ಡ್ ಕೇಳುತ್ತಿರುವುದು ಗೋಚರಿಸಿದೆ.

- Advertisement -

ಸದ್ಯ ದಿನೇಶ್ ಖುಶ್ವಾಹಾ ವಿರುದ್ಧ ಐಪಿಸಿ ಸೆಕ್ಷನ್ 304(2), 302 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನೀಮುಚ್ ಪೊಲೀಸರು ತಿಳಿಸಿದ್ದಾರೆ.

ದಿನೇಶ್ ಖುಷ್ವಾಹಾ ಎಂಬಾತ ತನ್ನ ಸಹೋದರನನ್ನು ಹೊಡೆದು ಕೊಂದಿದ್ದಾನೆ ಎಂದು ಮೃತನ ಸಹೋದರ ರಾಜೇಶ್ ಜೈನ್ ಆರೋಪಿಸಿದ್ದಾರೆ.

Join Whatsapp