ಸಂಸತ್ತಿನಲ್ಲಿ ಇನ್ಮುಂದೆ ಬಿಜೆಪಿಗೆ ಮುಸ್ಲಿಮರಿಲ್ಲ | ಅಬ್ಬಾಸ್ ನಖ್ವಿ ಸೇರಿ ಮೂವರು ಮುಸ್ಲಿಂ ಸಂಸದರಿಗೆ ಬೈ ಹೇಳಿದ ಭಾಜಪ

Prasthutha|

ನವದೆಹಲಿ: ರಾಜ್ಯಸಭೆಯ ಮೂವರು ಬಿಜೆಪಿ ಸಂಸದರಾದ ಮುಖ್ತಾರ್ ಅಬ್ಬಾಸ್ ನಖ್ವಿ, ಸೈಯದ್ ಜಾಫರ್ ಇಸ್ಲಾಂ ಮತ್ತು ಎಂ.ಜೆ.ಅಕ್ಬರ್ ಅವರು ಶೀಘ್ರದಲ್ಲೇ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಆದರೆ ಮುಂಬುರುವ ರಾಜ್ಯಸಭೆಗೆ ಬಿಜೆಪಿ ಈ ಮೂವರ ಹೆಸರು ಮರುನಾಮಕರಣ ಮಾಡದ ಕಾರಣ  ಬಿಜೆಪಿಗೆ ಇನ್ಮುಂದೆ  ಸಂಸತ್ತಿನಲ್ಲಿ ಮುಸ್ಲಿಂ ಮುಖವಿಲ್ಲದಂತಾಗಬಹುದು ಎಂಬುವುದು ಸ್ಪಷ್ಟವಾಗಿದೆ.

- Advertisement -

ಬಿಜೆಪಿ ಪಕ್ಷವು ರಾಜ್ಯಸಭೆಯಲ್ಲಿ ಮೂವರು ಮುಸ್ಲಿಂ ಸಂಸದರನ್ನು ಹೊಂದಿದೆ. ಕೆಳಮನೆಯಲ್ಲಿ ಯಾವುದೇ ಮುಸ್ಲಿಂ ಸಂಸದರಿಲ್ಲ. ಈ ಮಧ್ಯೆ ಮೂವರು ಮೇಲ್ಮನೆ ಪ್ರತಿನಿಧಿಗಳ ಅಧಿಕಾರಾವಧಿಯು ಈ ವರ್ಷ ಕೊನೆಗೊಳ್ಳುತ್ತಿರುವುದರಿಂದ ಮತ್ತು ಮುಂಬರುವ ಚುನಾವಣೆಗೆ ಪಕ್ಷವು ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡದ ಕಾರಣ, ಇನ್ಮುಂದೆ ಬಿಜೆಪಿಗೆ ಯಾವುದೇ ಮುಸ್ಲಿಂ ಸಂಸದರು ಇಲ್ಲ  ಎಂದು ತಿಳಿದು ಬಂದಿವೆ.

ಜೂನ್ 10 ರಂದು ನಡೆಯಲಿರುವ ಮೇಲ್ಮನೆ ಚುನಾವಣೆಗೆ ಪಕ್ಷವು 22 ಅಭ್ಯರ್ಥಿಗಳನ್ನು ಘೋಷಿಸಿದ್ದು  ಅವರಲ್ಲಿ ಯಾರೂ ಮುಸ್ಲಿಮರಲ್ಲ.  ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿರುವ  ನಖ್ವಿ ಅವರು ಜುಲೈ 7 ರಂದು ತಮ್ಮ ಅಧಿಕಾರಾವಧಿ ಮುಗಿದ ಆರು ತಿಂಗಳ ಒಳಗಾಗಿ ಸಂಸದರಾಗಿ ಆಯ್ಕೆಯಾಗದಿದ್ದರೆ ತಮ್ಮ ಕ್ಯಾಬಿನೆಟ್ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಜಾಫರ್ ಇಸ್ಲಾಂ ಅವರು ಜುಲೈ 4 ರಂದು ಮತ್ತು ಅಕ್ಬರ್ ಜೂನ್ 29 ರಂದು ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ.

Join Whatsapp