ಸ್ವಾತಂತ್ರ್ಯ ಹೋರಾಟಗಾರರನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿರುವ ಬಿಜೆಪಿ: ಆರ್ ಜೆಡಿ ಆರೋಪ

Prasthutha|

ಪಾಟ್ನಾ: 1857ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ, ಭಾರತೀಯರ ಧಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೀರ್ ಕುನ್ವರ್ ಸಿಂಗ್ ಜನ್ಮದಿನವನ್ನು ಬಿಜೆಪಿ ಸರಕಾರವು ತನ್ನ ರಾಜಕೀಯ ಲಾಭಕ್ಕಾಗಿ ಮತ್ತು ಗಿನ್ನಿಸ್ ದಾಖಲೆ ನಿರ್ಮಿಸಲು ಬಳಸುತ್ತಿದೆ ಎಂದು ರಾಷ್ಟ್ರೀಯ ಜನತಾ ದಳ (RJD) ಆರೋಪಿಸಿದೆ.

- Advertisement -

ಕಳೆದ ವಾರ ಭೋಜಪುರ ಜಿಲ್ಲೆಯ ಜಗದೀಶ್ ಪುರದಲ್ಲಿ 75,000 ಕ್ಕೂ ಹೆಚ್ಚು ರಾಷ್ಟ್ರಧ್ವಜಗಳನ್ನು ಹಾರಿಸುವ ಮೂಲಕ 12 ಜಿಲ್ಲೆಗಳ ಜನರನ್ನು ಸೇರಿಸುವುದಾಗಿ ಮತ್ತು ಸಾಮೂಹಿಕವಾಗಿ 75,000 ಕ್ಕೂ ಹೆಚ್ಚು ರಾಷ್ಟ್ರಧ್ವಜಗಳನ್ನು ಹಾರಿಸುವುದಾಗಿ ಬಿಜೆಪಿ ಘೋಷಿಸಿದ್ದು ಈ  ಹಿಂದೆ 57,000 ರಾಷ್ಟ್ರಧ್ವಜಗಳನ್ನು ಹಾರಿಸಿದ್ದ ಪಾಕಿಸ್ತಾನ ಹೊಂದಿರುವ ದಾಖಲೆಯನ್ನು ಮುರಿಯಲು ಹೊರಟಿದೆ.

ಏಪ್ರಿಲ್ 23ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಉಪಕ್ರಮವಾದ “ಆಜಾದಿ ಕಾ ಅಮೃತ್ ಮಹೋತ್ಸವ”ದ ಭಾಗವಾಗಿ ಕೇಂದ್ರವು  ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿರೋಧ ಪಕ್ಷಗಳನ್ನು ಕೆರಳಿಸಿದೆ.

- Advertisement -

ಅರಾದಲ್ಲಿ ಗಣನೀಯ ಸಂಖ್ಯೆಯ ರಜಪೂತ ಮತದಾರರಿದ್ದು ಮತ್ತು ವೀರ್ ಕುನ್ವರ್ ಸಿಂಗ್ ಅವರ ರಜಪೂತ ಗುರುತನ್ನು ರಾಜಕೀಯ ಲಾಭಕ್ಕಾಗಿ ಪಕ್ಷಗಳು ಬಳಸುತ್ತಿವೆ ಎಂದು ಆರ್ಜೆಡಿ ನಾಯಕರು ಆರೋಪಿಸಿದ್ದಾರೆ.

“ಕುನ್ವರ್ ಸಿಂಗ್ ಅವರ ಸ್ಮರಣಾರ್ಥ ಜಗದೀಶ್ ಪುರದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ದೊಡ್ಡ ಗೌರವದ ವಿಷಯವಾಗಿದ್ದರೂ, ಈ ಸಂದರ್ಭದಲ್ಲಿ ಸಾಮೂಹಿಕ ಧ್ವಜಗಳ ಪ್ರದರ್ಶನದ ಹಿಂದೆ ಬಿಜೆಪಿಯ ರಾಜಕೀಯ ಲಾಭವಷ್ಟೇ ಅಡಗಿದೆ ಎಂದು ಜೆಡಿಯು ನಾಯಕರೊಬ್ಬರು ಹೇಳಿದರು.

ಈ ಹಿಂದೆ ಸಂಯುಕ್ತ ಜನತಾದಳದ ರಜಪೂತ ನಾಯಕಿ ಮೀನಾ ಸಿಂಗ್ ಮತ್ತು ಅವರ ಪತಿ ಅಜಿತ್ ಸಿಂಗ್ ಅರಾ ಲೋಕಸಭೆಯ ಜಗದೀಶ್ ಪುರವನ್ನು ಪ್ರತಿನಿಧಿಸಿದ್ದು ಪ್ರಸ್ತುತ ಬಿಜೆಪಿಯ ಕೇಂದ್ರ ಸಚಿವ ಆರ್.ಕೆ.ಸಿಂಗ್ ಅವರು ಪ್ರತಿನಿಧಿಸುತ್ತಿದ್ದಾರೆ.



Join Whatsapp