5 ಲಕ್ಷ ಮುಸ್ಲಿಂ ಕುಟುಂಬಗಳು, ಮದರಸಾ, ದರ್ಗಾಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಬಿಜೆಪಿ ನಿರ್ಧಾರ

Prasthutha|

ಲಕ್ನೋ: ದೇಶದ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಅಂಗವಾಗಿ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಉತ್ತೇಜನ ನೀಡುವ ಸಲುವಾಗಿ, ಆಗಸ್ಟ್ 15 ರಂದು ಸುಮಾರು 5 ಲಕ್ಷ ಮುಸ್ಲಿಂ ಕುಟುಂಬಗಳು, ಮದರಸಾಗಳು ಮತ್ತು ದರ್ಗಾಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಬಿಜೆಪಿ ಮುಂದಾಗಿದೆ.

- Advertisement -

ಬಿಜೆಪಿ ಮುಸ್ಲಿಂ ಮೋರ್ಚಾದಡಿ ಆಗಸ್ಟ್ 12 ರಿಂದ ಮೂರು ದಿನಗಳ ಕಾಲ ಈ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ.

ಮದರಸಾಗಳು ಮತ್ತು ದರ್ಗಾಗಳಲ್ಲಿ ಧ್ವಜ ಅಳವಡಿಸಿದ ಫೋಟೋಗಳನ್ನು ತೆಗೆದು ಅದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪ್ಲೋಡ್ ಮಾಡಲು ಆಡಳಿತ ಪಕ್ಷದ ಅಲ್ಪಸಂಖ್ಯಾತ ಘಟಕಕ್ಕೆ ಸೂಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

- Advertisement -

ಯುಪಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಕುನ್ವರ್ ಬಸಿತ್ ಅಲಿ ಈ ಅಭಿಯಾನವನ್ನು ದೃಢಪಡಿಸಿದ್ದಾರೆ. ಮದ್ರಸಾ ಮತ್ತು ದರ್ಗಾಗಳಿಗೆ ಈ ಅಭಿಯಾನವನ್ನು ಯೋಜಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ

 2017 ರಲ್ಲಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ, ಸ್ವಾತಂತ್ರ್ಯ ದಿನದಂದು ರಾಜ್ಯದ ಎಲ್ಲಾ ಮದರಸಾಗಳಲ್ಲಿ ಧ್ವಜ ಹಾರಿಸುವುದು ಮತ್ತು ರಾಷ್ಟ್ರಗೀತೆಯನ್ನು ಹಾಡುವುದನ್ನು ಬಿಜೆಪಿ ಕಡ್ಡಾಯಗೊಳಿಸಿತ್ತು ಎಂದು ಅಲಿ ಹೇಳಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ, ಇದು ತ್ರಿವರ್ಣ ಧ್ವಜವನ್ನು ರಾಜಕೀಯಗೊಳಿಸುವ ತಂತ್ರ ಎಂದು ಟೀಕಿಸಿದ್ದಾರೆ.

Join Whatsapp