“ಪಾಕಿಸ್ತಾನ, ಬಾಂಗ್ಲಾ ದೇಶಿಗಳನ್ನು ಓಡಿಸಲು ಬಿಜೆಪಿ ಅಧಿಕಾರಿಗಳಿಗೆ 15 ನಿಮಿಷ ಸಮಯ ನೀಡಲಿದೆ”

Prasthutha|

ಹೈದರಾಬಾದ್: ಕರೀಂ ನಗರ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅಕ್ಬರುದ್ದೀನ್ ಓವೈಸಿಯ ಹಳೆಯ ’15 ನಿಮಿಷ’ ಹೇಳಿಕೆಯ ಪರೋಕ್ಷ ಉಲ್ಲೇಖವನ್ನು ಮಾಡಿದ್ದಾರೆ.

- Advertisement -

ಗ್ರೇಟರ್ ಹೈದರಬಾದ್ ಪುರಸಭೆಯನ್ನು ಗೆದ್ದ 24 ಗಂಟೆಗಳೊಳಗಾಗಿ ಬಿಜೆಪಿ ಪಾಕಿಸ್ತಾನಿಗಳು, ಬಾಂಗ್ಲಾ ದೇಶಿಗಳು, ಅಫ್ಘಾನಿಯನ್ನರು ಮತ್ತು ರೊಹಿಂಗ್ಯಾಗಳನ್ನು ಹೈದರಾಬಾದ್ ನಿಂದ ಓಡಿಸುವುದಕ್ಕಾಗಿ ಅಧಿಕಾರಿಗಳಿಗೆ 15 ನಿಮಿಷಗಳ ಸಮಯ ನೀಡಲಿದೆ ಎಂದು ಹೇಳಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು ‘ಭಾಗ್ಯನಗರ’ದಲ್ಲಿ ಜನರು ಬಿಜೆಪಿ ಪರವಾಗಿ ಮತನೀಡಬೇಕೆಂದು ಅವರು ಮತದಾರರನ್ನು ಕೇಳಿಕೊಂಡರು.

- Advertisement -

ಎ.ಐ.ಎಂ.ಎಂ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವಂತೆ ಹೈದರಬಾದ್ ಇತರ್ ಭಾಗಗಳಿಗೂ ಹಿಂದೂಗಳನ್ನು ದಮನಿಸುವ ಘಟನೆಗಳು ಹರಡಬಹುದೆಂದು ಅವರು ಆರೋಪಿಸಿದರು.



Join Whatsapp