ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ವತಿಯಿಂದ ರಕ್ತದಾನ ಶಿಬಿರ | ಅಂಬ್ಲಮೊಗರು ಶಾಖೆ ಉದ್ಘಾಟನೆ

Prasthutha|

ಉಳ್ಳಾಲ : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕರ್ನಾಟಕ ಹಾಗು ಯೆನಪೋಯ ಮೆಡಿಕಲ್ ಕಾಲೇಜ್ ಇವರ ಸಹಭಾಗಿತ್ವದೊಂದಿಗೆ ರಕ್ತದಾನ ಶಿಬಿರವು ಪ್ರಾಥಮಿಕ ಆರೋಗ್ಯ ಕೇಂದ್ರ, ಎಲ್ಯಾರ್ ಪದವಿನಲ್ಲಿ  ಯಶಸ್ವಿಯಾಗಿ ನಡೆಯಿತು. ಇದೇ ವೇಳೆ ಬ್ಲಡ್ ಡೋನರ್ಸ್ ಪೋರಂ ಅಂಬ್ಲಮೊಗರು ಶಾಖೆಯ ಉದ್ಘಾಟನೆಯು ನೆರವೇರಿತು.

- Advertisement -

ರಕ್ತದಾನ ಒಬ್ಬ ಮನುಷ್ಯನಿಗೆ ತನ್ನ ಶರೀರದಿಂದ ಅತ್ಯಂತ ಸುಲಭ ಹಾಗು ಅಷ್ಟೇ ಮಹತ್ವದ ದಾನ ಮಾಡಬಹುದಾದ ದಾನವಾಗಿದೆ. ವೈದ್ಯಕೀಯ ಲೋಕ ಎಷ್ಟೇ ಮುಂದುವರಿದಿದ್ದರೂ ರಕ್ತಕ್ಕೆ ಪರ್ಯಾಯವಾದ ಇನ್ನೊಂದು ರಕ್ತಕಣಗಳನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ ಎಂದು ಕಾರ್ಯಕ್ರಮ ಉದ್ಘಾಟಿಸಿದ ಪಿ.ಎಫ್.ಐ ಉಳ್ಳಾಲ ವಲಯ ಅಧ್ಯಕ್ಷ ತಂಝೀಲ್ ಉಳ್ಳಾಲ ತಿಳಿಸಿದರು. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಅಧ್ಯಕ್ಷರಾದ ಶುಕೂರ್ ರಹ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪಿ ಎಫ್ ಐ ಉಳ್ಳಾಲ ವಲಯ ಕಾರ್ಯದರ್ಶಿಯಾದ ಸಯೀದ್ ಕಿನ್ಯ, ಸಮಾಜ ಸೇವಕರಾದ ಅಬ್ದುಲ್ ರಶೀದ್ ಕುಂಡೂರ್, ಯೇನಪೋಯ ಮೆಡಿಕಲ್ ಕಾಲೇಜ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಮ್ಮದ್ ನವಾಝ್, ಪಿ ಎಫ್ ಐ ಮಂಗಳೂರು ಮೆಡಿಕಲ್ ಇನ್ಚಾರ್ಜ್ ಮೊಹಮ್ಮದ್ ಸುರೈ ಸಿದ್ದೀಕ್, ಪಿ ಎಫ್ ಐ ಮದಕ ಘಟಕ ಅಧ್ಯಕ್ಷರಾದ ಇಜಾಝ್ ಅಹ್ಮದ್  ಉಪಸ್ಥಿತರಿದ್ದರು.ಅಬ್ದುಲ್ ಹಮೀದ್  ಕಾರ್ಯಕ್ರಮ ನಿರೂಪಿಸಿದರು.

- Advertisement -

ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 64 ಮಂದಿ ರಕ್ತದಾನ ಮಾಡಿ ಸಹಕರಿಸಿದರು.

Join Whatsapp