ಜನಾಕ್ರೋಶ ಯಾತ್ರೆ ನಿಲ್ಲಿಸಿ ಯು ಟರ್ನ್ ಹೊಡೆದ ಬಿಜೆಪಿ

Prasthutha|

ಜೈಪುರ: ರಾಜಸ್ತಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯನ್ನು ಬಿಜೆಪಿ ಹಿಂಪಡೆದುಕೊಂಡಿದೆ.

- Advertisement -

“ಯಾತ್ರೆ ಮೊದಲ ದಿನವೆ ಮುಗಿದು ಹೋಗಿದೆ. ಕುರ್ಚಿಗಳೆಲ್ಲ ಬರಿದಾಗಿದ್ದವು. ಸದ್ಯ ಬಿಜೆಪಿ ತನ್ನ ಮುಖ ಉಳಿಸಿಕೊಳ್ಳಲು ಇದನ್ನು ನಿಲ್ಲಿಸಿದೆ” ಎಂದು ರಾಜಸ್ತಾನ ಪಿಸಿಸಿ ಅಧ್ಯಕ್ಷ ಗೋವಿಂದ್ ಸಿಂಗ್ ದೋಸ್ತಾರಾ ಟೀಕಿಸಿದ್ದಾರೆ.

ಜಗತ್ತಿನೆಲ್ಲೆಡೆ ಕೊರೋನಾ ಮರುಕಳಿಸಿರುವುದರಿಂದ ಯಾತ್ರೆ ನಿಲ್ಲಿಸಿರುವುದಾಗಿ ಜನ ಆಕ್ರೋಶ ಯಾತ್ರೆ ಆರಂಭಿಸಿದ ಒಂದು ಗಂಟೆಯ ಬಳಿಕ ಬಿಜೆಪಿ ಹೇಳಿಕೆ ನೀಡಿದೆ.

- Advertisement -

 ಮತ್ತೆ ಒಂದು ಗಂಟೆಯ ಬಳಿಕ ರಾಜಸ್ತಾನದ ಬಿಜೆಪಿ ಘಟಕ ಇನ್ನೊಂದು ಹೇಳಿಕೆ ನೀಡಿದೆ. ಕೇಂದ್ರದ ಕೋವಿಡ್ ನಿಯಮಾವಳಿ ಆಲಿಸಿ ಅದರಂತೆ ಯಾತ್ರೆ ಮುಂದುವರಿಸಲಾಗುವುದು ಎಂದು ಹೇಳಿದೆ.

ರಾಜಸ್ತಾನದ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ”ಕೇಂದ್ರ ಮತ್ತು ರಾಜ್ಯ ಸರಕಾರದ ಕೊರೋನಾ ಮುನ್ನೆಚ್ಚರಿಕೆ ಅನುಸರಿಸಿ ಮತ್ತೆ ಯಾತ್ರೆ ಆರಂಭವಾಗುತ್ತದೆ.” ಎಂದು ಟ್ವೀಟ್ ಮಾಡಿದ್ದಾರೆ.

“ನಮ್ಮ ಜನ ಆಕ್ರೋಶ ಯಾತ್ರೆಯು ರಾಜಸ್ತಾನ ಕಾಂಗ್ರೆಸ್ಸಿನ ದುರಾಡಳಿತದ ವಿರುದ್ಧ, ಜಂಗಲ್ ರಾಜ್ ವಿರುದ್ಧ, ಭ್ರಷ್ಟಾಚಾರದ ವಿರುದ್ಧ. ಆದರೆ ಕೊರೋನಾ ಕಾರಣಕ್ಕೆ ಸಾರ್ವಜನಿಕ ಹಿತವನ್ನು ಪರಿಗಣಿಸಿ ಮುಂದಿನ ದಿನಾಂಕ ಪ್ರಕಟಿಸುವ ವರೆಗೆ ಯಾತ್ರೆ ಮುಂದೂಡಲಾಗಿದೆ” ಎಂದು ಪೂನಿಯಾ ಮೊದಲು ಹೇಳಿದ್ದರು.

ಅನಂತರ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು ಸದ್ಯಕ್ಕೆ ಯಾತ್ರೆ ನಿಲ್ಲಿಸಲಾಗಿದೆ. ಆದರೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಅಲ್ಲಲ್ಲಿ ಪ್ರತಭಟನೆ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಜನ ಆಕ್ರೋಶ ಯಾತ್ರೆ 14ರಂದೇ ನಿಲ್ಲಿಸುವುದಾಗಿ ಹೇಳಲಾಗಿತ್ತು. ಆದರೆ ಜನ ಆಕ್ರೋಶ ಯಾತ್ರೆಗಳನ್ನು ನಡೆಸಲಾಗುವುದು. ಇದಕ್ಕೆ ಅರ್ಥವಿಲ್ಲ, ಯಾತ್ರೆಗೆ ಜನ ಬೆಂಬಲ ಸಿಕ್ಕಿಲ್ಲ ಆರ್ ಪಿಸಿಸಿ ಅಧ್ಯಕ್ಷ ಗೋವಿಂದ್ ಸಿಂಗ್ ದೋಸ್ತಾರಾ  ಹೇಳಿದರು.

14ರಿಂದಲೂ ಯಾತ್ರೆಗೆ ಜನರಿಲ್ಲ, ಸಭೆಗೆ ಇಟ್ಟ ಕುರ್ಚಿಗಳು ಖಾಲಿ ಖಾಲಿ. ಸರಿಯಾದ ಫೋಟೋ ಯಾವುದಾದರೂ ನೋಡಿದ್ದೀರಾ ಎಂದೂ ಅವರು ಪ್ರಶ್ನಿಸಿದರು.

2023ರಲ್ಲಿ ಚುನಾವಣೆ ಇರುವುದರಿಂದ ಬಿಜೆಪಿಯು ಯಾತ್ರೆ ಹಮ್ಮಿಕೊಂಡು ಅದರಲ್ಲಿ ಆರಂಭದಲ್ಲೇ ಹಿನ್ನಡೆ ಕಂಡಿದೆ ಎಂದು ಹೇಳಲಾಗಿದೆ.

ಕೇಂದ್ರ ಸರಕಾರದ ಆರೋಗ್ಯ ಮಂತ್ರಿ ಮನ್ಸುಖ್ ಮಾಂಡವೀಯಾ ಕೋವಿಡ್ ಎಚ್ಚರಿಕೆ ನೀಡಿದ್ದಾರೆ. ಅದೂ ಯಾತ್ರೆ ನಿಲ್ಲಿಸಲು ಕಾರಣ ಎಂದೂ ರಾಜಸ್ತಾನ ಬಿಜೆಪಿ ಘಟಕ ಹೇಳಿದೆ



Join Whatsapp