ಜಾಹೀರಾತಿಗಾಗಿ ಬರೋಬ್ಬರಿ 700 ಕೋಟಿ ರೂ. ಖರ್ಚು ಮಾಡಿದ ಹರಿಯಾಣ ಬಿಜೆಪಿ ಸರ್ಕಾರ!

Prasthutha|

ಚಂಡೀಗಡ: ಹರಿಯಾಣದ ಬಿಜೆಪಿ ಸರ್ಕಾರವು ಜಾಹೀರಾತಿಗಾಗಿ  700 ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ. 2015 ರಿಂದ  ಈಚೆಗೆ  ತನ್ನ ಸಾಧನೆ, ಘೋಷಣೆಗಳು ಮತ್ತು ಯೋಜನೆಗಳನ್ನು ವಿವರಿಸುವ ಸಲುವಾಗಿ ಇಷ್ಟು ಮೊತ್ತವನ್ನು ಖರ್ಚು ಮಾಡಿದೆ.

- Advertisement -

 ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅಫ್ತಾಬ್ ಅಹ್ಮದ್ 2015 ರಿಂದ ಸರ್ಕಾರವು ತನ್ನ ಸಾಧನೆಗಳು, ಪ್ರಕಟಣೆಗಳು, ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆ ಮತ್ತು ಯೋಜನೆಗಳ ಜಾಹೀರಾತುಗಳಿಗಾಗಿ ಪತ್ರಿಕೆಗಳು, ಬ್ಯಾನರ್ ಗಳು, ಇಂಟರ್ನೆಟ್, ಟಿವಿ ಮತ್ತು ರೇಡಿಯೊ ಇತ್ಯಾದಿಗಳಿಗೆ ಪ್ರತಿವರ್ಷ ಖರ್ಚು ಮಾಡಿದ ಮೊತ್ತದ ಕುರಿತು ವಿವರ ನೀಡುವಂತೆ  ಕೇಳಿದ್ದರು. ಅದಕ್ಕೆ  ಲಿಖಿತ ಉತ್ತರದ ಮೂಲಕ ಸರ್ಕಾರ ಜನವರಿ 2015 ರಿಂದ ಡಿಸೆಂಬರ್ 13, 2021ರ ಅವಧಿಯ ಮಾಹಿತಿಯನ್ನು ನೀಡಿದೆ.

ಈ ಅವಧಿಯಲ್ಲಿ ಪತ್ರಿಕೆಗಳ ಜಾಹೀರಾತಿಗಾಗಿ ರೂ. 596 ಕೋಟಿ, ಟಿವಿ ಜಾಹೀರಾತುಗಳಿಗೆ ರೂ. 96.34 ಕೋಟಿ, ರೇಡಿಯೋಗೆ ರೂ. 21.76 ಕೋಟಿ, ಇಂಟರ್ನೆಟ್ ಗೆ ರೂ. 1.19 ಕೋಟಿ ಮತ್ತು ಬ್ಯಾನರ್ ಗಳಿಗೆ ರೂ. 4.39 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

Join Whatsapp