ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ

Prasthutha|

ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

- Advertisement -

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರು ಶನಿವಾರ ಗಾಂಧಿನಗರದ ಶ್ರೀ ಕಮಲಂ ಕಚೇರಿಯಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಮುಖ್ಯವಾಗಿ ಗುಜರಾತನ್ನು ಟ್ರಿಲಿಯನ್ ಆರ್ಥಿಕತೆಯ ರಾಜ್ಯವಾಗಿಸುವುದಾಗಿ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಲಾಗಿದೆ. ಪ್ರತಿಗಾಮಿಗಳನ್ನು ಗುರುತಿಸಲು ಆಂಟಿ ರಿಯಾಡಿಕಲೈಸೇಶನ್ ಸೆಲ್ ಮತ್ತು ಉಗ್ರ ಸಂಘಟನೆಗಳನ್ನು ಪತ್ತೆ ಹಚ್ಚಲು ಸ್ಲೀಪರ್ ಸೆಲ್ ರಚಿಸಲಾಗುವುದು ಎಂದೂ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

- Advertisement -

ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಮಾಡಿದರೆ ನಷ್ಟ ಮಾಡಿದವರಿಂದಲೇ ಅದನ್ನು ವಸೂಲು ಮಾಡಲು ಕಾನೂನು ರಚಿಸಲಾಗುವುದು ಎಂದು ನಡ್ಡಾ ಪ್ರಣಾಳಿಕೆ ಬಿಡುಗಡೆ ವೇಳೆ ಹೇಳಿದರು.

ಯುಸಿಸಿ- ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಬಿಜೆಪಿ ಪ್ರಣಾಳಿಕೆ ಹೇಳಿದೆ.

ಕೆಜಿಯಿಂದ ಪಿಜಿವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣದ ಆಶ್ವಾಸನೆ ನೀಡಲಾಗಿದೆ. ಆಯುಷ್ಮಾನ್ ಭಾರತ್ ನಲ್ಲಿ ನೀಡುವ ವಿಮೆ ಮೊತ್ತವನ್ನು 5ರಿಂದ 10 ಲಕ್ಷಕ್ಕೆ ದುಪ್ಪಟ್ಟಾಗಿಸುವುದಾಗಿಯೂ ಪ್ರಣಾಳಿಕೆ ಹೇಳಿದೆ. 

Join Whatsapp