ಮುಲಾಯು ಸಿಂಗ್ ಯಾದವ್ ಸೊಸೆಗೆ ಟಿಕೆಟ್ ನಿರಾಕರಿಸಿದ ಬಿಜೆಪಿ

Prasthutha|

ಲಕ್ನೋ: ಉತ್ತರ ಪ್ರದೇಶದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದಂತೆ ಬಿಜೆಪಿಯು ಲಕ್ನೋ ದಲ್ಲಿ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದು, ಇತ್ತೀಚೆಗೆ ಬಿಜೆಪಿ ಸೇರಿದ ಅಪರ್ಣಾ ಯಾದವ್ ಗೆ ಶಾಕ್ ನೀಡಿದೆ.

- Advertisement -

ಮಾಜಿ ಮುಖ್ಯ ಮಂತ್ರಿ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಎಸ್ ಪಿ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ ಎನ್ನುವುದೇ ಅಪರ್ಣಾ ಯಾದವ್ ಬಿಜೆಪಿ ಸೇರಲು ಪ್ರಮುಖ ಕಾರಣ ಎಂದು ಕೇಳಿಬಂದಿತ್ತಾದರೂ ಅಪರ್ಣಾ ಯಾದವ್ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದರು. “ ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ನಾನು ಪ್ರಭಾವಿತಳಾಗಿದ್ದೆ ಎಂದಿದ್ದರು.

ಅಪರ್ಣಾ ಯಾದವ್ ಲಕ್ನೋ ಕಂಟೋನ್ಮೆಂಟ್ ನಲ್ಲಿ ಟಿಕೆಟ್ ಬಯಸಿದ್ದರು ಎನ್ನಲಾಗಿದೆ.ಆದರೆ ಬಿಜೆಪಿ ಸಚಿವ ಬ್ರಿಜೇಶ್ ಪಾಠಕ್ ಗೆ ಟಿಕೆಟ್ ನೀಡಿದೆ.



Join Whatsapp