‘ಬಿಜೆಪಿ ಕಾರ್ಯಕರ್ತರು ಕಠಿಣ ಪರಿಶ್ರಮಿಗಳು, ಅವರಿಗೆ ಕೋವಿಡ್ ಬಾಧಿಸದು’ : ಬಿಜೆಪಿ ಶಾಸಕ
Prasthutha: March 23, 2021

ಬಿಜೆಪಿ ಕಾರ್ಯಕರ್ತರು ಕಠಿಣ ಪರಿಶ್ರಮಿಗಳಾಗಿರುವುದರಿಂದ ಅವರಿಗೆ ಕೋವಿಡ್ ಬಾಧಿಸುವುದಿಲ್ಲ ಎಂದು ಗುಜರಾತ್‌ನ ಬಿಜೆಪಿ ಶಾಸಕ ಹೇಳಿದ್ದಾರೆ. ಚುನಾವಣಾ ಪ್ರಚಾರದ ಸಮಯದ ಜನದಟ್ಟಣೆಯು ಗುಜರಾತ್‌ನಲ್ಲಿ ಕೊರೋನಾ ಹರಡಲು ಕಾರಣವಾಗಿತ್ತಲ್ಲವೇ ಎಂಬ ಮಾಧ್ಯಮದ ಪ್ರಶ್ನೆಗೆ ದಕ್ಷಿಣ ರಾಜ್‌ಕೋಟ್‌ನ ಬಿಜೆಪಿ ಶಾಸಕ ಗೋವಿಂದ್ ಪಟೇಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಗುಜರಾತ್‌ನಲ್ಲಿ ಕಳೆದ ತಿಂಗಳು ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿತ್ತು. ಉತ್ತಮವಾಗಿ ಕೆಲಸ ಮಾಡುವ ಯಾರ ಬಳಿಯೂ ಕೊರೊನಾ ಬರುವುದಿಲ್ಲ , ಉತ್ತಮವಾಗಿ ಕೆಲಸ ಮಾಡಿದ ಕಾರಣ ಬಿಜೆಪಿ ಕಾರ್ಯಕರ್ತರ ಬಳಿಗೆ ಕೊರೋನಾ ಸುಳಿಯಲೇ ಇಲ್ಲ ಎಂದು ಶಾಸಕರು ಹೇಳಿದ್ದಾರೆ. ವಾಸ್ತವವಾಗಿ ಕಳೆದ ತಿಂಗಳು ನಡೆದ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಅನೇಕ ಬಿಜೆಪಿ ನಾಯಕರಿಗೆ ಕೊರೊನಾ ಪಾಸಿಟಿವ್ ಆಗಿತ್ತು.
