ಹಿಂದುಳಿದ ಜಾತಿಯವರಿಗೆ ಮೀಸಲಾತಿ ನೀಡದಂತೆ ಬಿಜೆಪಿ ಶಾಸಕ ಒತ್ತಾಯ

Prasthutha|

ಮುಂಬೈ: ಇತರ ಹಿಂದುಳಿದ ಜಾತಿಯವರಿಗೆ (ಒಬಿಸಿ) ಮೀಸಲಾತಿ ನೀಡುವ ಮಹಾರಾಷ್ಟ್ರದ ಎಂವಿಎ- ಮಹಾ ವಿಕಾಸ ಅಘಾಡಿಯ ನಿರ್ಧಾರದ ವಿರುದ್ಧ ಬಿಜೆಪಿ ಮೇಲ್ಮನೆ ಸದಸ್ಯ ಗೋಪಿಚಂದ್ ಪಡಲ್ಕರ್ ತೀವ್ರವಾಗಿ ಟೀಕಿಸಿದ್ದಾರೆ.

- Advertisement -

ಹಾಗಾದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್ಲ ಒಬಿಸಿ ಅಭ್ಯರ್ಥಿಗಳನ್ನೆ ಹಾಕಿ ನೋಡೋಣ ಎಂದು ಅವರು ಸವಾಲು ಹಾಕಿದ್ದಾರೆ.
“ಈ ಸರಕಾರದವರು ಹಿಂದೆ ಒಬಿಸಿ ಸಮುದಾಯದವರನ್ನು ತಾವೇರಲು ಮೆಟ್ಟಿಲು ಮಾಡಿಕೊಂಡಿದ್ದರು. ಈಗ ದಿಢೀರನೆ ಅವರ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ. ಇದು ಹಾಸ್ಯಾಸ್ಪದ ಮತ್ತು ಸುಳ್ಳು. ನ್ಯಾಯಾಂಗವು ಇವರ ಮೀಸಲಾತಿ ಬೇಡಿಕೆಯನ್ನು ವಜಾ ಮಾಡುವವರೆಗೆ ಎಂವಿಎ ಸರಕಾರವು ನ್ಯಾಯಾಲಯದಲ್ಲಿ ಕಾಲಾವಕಾಶ ಕೇಳುತ್ತಲೇ ಇರುತ್ತದೆ. ಈಗ ನ್ಯಾಯಾಲಯದ ತೀರ್ಮಾನವು ಅವರನ್ನು ಅಲುಗಾಡಿಸಿದೆ” ಎಂದು ಬಿಜೆಪಿಯ ಪಡಲ್ಕರ್ ಹೇಳಿದರು.

ನ್ಯಾಯಾಲಯವು ಒಬಿಸಿ ಮೀಸಲಾತಿಯನ್ನು ರದ್ದು ಮಾಡಿದ್ದು, ಈ ಸರಕಾರಕ್ಕೆ ಇವೆಲ್ಲ ಮೊದಲೇ ಗೊತ್ತಿತ್ತು ಎಂದು ಅವರು ಮಾತು ಕಕ್ಕಿದರು. “ಹಿಂದುಳಿದವರ ಆಯೋಗ ಏನು ಮಾಡುತ್ತಿದೆ ಎಂದು ಈ ಸರಕಾರಕ್ಕೆ ಏನೂ ಗೊತ್ತಿಲ್ಲ. ಒಬಿಸಿ ಸಂಬಂಧಿ ಮಂತ್ರಿಗಳು ರಚಿಸಿದ ಸಹ ಸಮಿತಿಯು ಪ್ರಾಯೋಗಿಕವಾಗಿ ದತ್ತಾಂಶ ಸಂಗ್ರಹಿಸುವುದನ್ನು ಮಾಡುತ್ತದೆಯೇ ಇಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಿಲ್ಲ. ಆದರೆ ಮಂತ್ರಿಗಳು ಮೀಸಲಾತಿ ಬಗೆಗೆ ಸುಳ್ಳು ಆಶ್ವಾಸನೆ ನೀಡುವುದನ್ನು ನಿಲ್ಲಿಸಿಲ್ಲ.” ಬಿಜೆಪಿ ಎಮ್ಮೆಲ್ಸಿ ಹೇಳಿದರು.

Join Whatsapp