ಕೊರೋನಾ ಇನ್ನಿಲ್ಲ, ಮಾಸ್ಕ್ ಯಾಕೆ ಹಾಕಬೇಕು ಎಂದಿದ್ದ ಬಿಜೆಪಿ ಶಾಸಕ ಕೋವಿಡ್ ಗೆ ಬಲಿ !

Prasthutha|


ಲಕ್ನೋ : ಕೋವಿಡ್ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ದೇಶವು ದಿನನಿತ್ಯ ಸಾವಿರಾರು ಜನರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ. ಈ ಸೋಂಕಿಗೆ ಉತ್ತರಪ್ರದೇಶದ ಬಿಜೆಪಿಯ ಹಾಲಿ ಶಾಸಕ ಕೇಸರ್ ಸಿಂಗ್ ಗಂಗ್ವಾರ್ ಕೂಡ ಸಾವಿಗೀಡಾಗಿದ್ದಾರೆ. ಉತ್ತರಪ್ರದೇಶದ ನವಾಬ್ ಗಂಜ್ ಕ್ಷೇತ್ರದ ಶಾಸಕರಾಗಿದ್ದ ಇವರಿಗೆ 64 ವಯಸ್ಸಾಗಿತ್ತು.

- Advertisement -


ಇತ್ತೀಚೆಗಷ್ಟೆ ಕೇಸರ್ ಸಿಂಗ್ ಮಾಸ್ಕ್ ಧರಿಸದೆ ವಿಧಾನಸಭೆಗೆ ಅಧಿವೇಶನಕ್ಕೆ ಆಗಮಿಸಿದ್ದರು. ಈ ಬಗ್ಗೆ ಮಾಧ್ಯಮ ಪ್ರಧಿನಿದಿಯೊಬ್ಬರು ಪ್ರಶ್ನಿಸಿದಾಗ ಕೊರೋನಾ ಈಗ ನಿರ್ನಾಮವಾಗಿದೆ. ನಾನೇಕೆ ಮಾಸ್ಕ್ ಧರಿಸಬೇಕು? ನನ್ನ ಮಾಸ್ಕ್ ಎಲ್ಲಿಟ್ಟಿದ್ದೇನೆಂದು ನನಗೇ ಗೊತ್ತಿಲ್ಲ ಎಂದು ಉಡಾಫೆಯಾಗಿ ಮಾತನಾಡಿದ್ದರು. ನಂತರ ಎ 18ರಂದು ಸೋಂಕು ತಗುಲಿ ಬರೇಲಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೋಂಕಿಗೆ ಬಲಿಯಾಗಿದ್ದಾರೆ.


ಈ ಘಟನೆ ಕೊರೋನಾ ನಿಯಮ ಉಲ್ಲಂಘಿಸುವವರಿಗೆ ಪಾಠವಾಗಿದೆ. ಮಾಸ್ಕ್ , ಸಾಮಾಜಿಕ ಅಂತರದ ಮಾರ್ಗಸೂಚಿಗಳಲ್ಲಿ ಉಡಾಫೆ ತೋರಿಸದೆ ಖಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಈ ದೇಶವು ಸಂಕಷ್ಟದ ದಾರಿಗೆ ಸಾಗಬಲ್ಲವು ಎಂದು ತಜ್ಞರು ಎಚ್ಚರಿಸಿದ್ದಾರೆ.

Join Whatsapp