ಎಮ್ಮೆ ಓಡಿಸುವ ಸ್ಪರ್ಧೆಗೆ ಚಾಲನೆ: ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿ ಶಾಸಕ

Prasthutha|

ಬೆಳಗಾವಿ: ಮಕರ ಸಂಕ್ರಮಣ ಹಬ್ಬದ ಹಿನ್ನೆಲೆ ಎಮ್ಮೆ ಓಡಿಸುವ ಸ್ಪರ್ಧೆ ಏರ್ಪಡಿಸಿ, ಸಾವಿರಾರು ಜನರು ಒಟ್ಟಿಗೆ ಜಮಾಯಿಸಿ ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ದುರಂತ ಅಂದರೆ ಆಡಳಿತಾರೂಢ ಬಿಜೆಪಿ ಸರ್ಕಾರದ ಶಾಸಕರೇ ಸ್ಪರ್ಧೆಗೆ ಚಾಲನೆ ನೀಡಿದ್ದಾರೆ.

- Advertisement -

ಬೆಳಗಾವಿ ನಗರದ ಚವಾಟ್ ಏರಿಯಾದಲ್ಲಿ ಎಮ್ಮೆ ಓಡಿಸುವ ಸ್ಪರ್ಧೆ ವೇಳೆ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ಸಾವಿರಾರು ಜನರು ಭಾಗಿಯಾಗಿದ್ದಾರೆ. ಬೆಳಗಾವಿಯಲ್ಲಿ ಕೋವಿಡ್ ತಾಂಡವವಾಡುತ್ತಿದ್ದರೂ ಬಿಜೆಪಿ ಶಾಸಕ ಅನಿಲ್ ಬೆನಕೆ ಬೇಜವಾಬ್ದಾರಿ ಪ್ರದರ್ಶಿಸಿ, ಎಮ್ಮೆ ಓಟದ ಸ್ಪರ್ಧೆಗೆ ಚಾಲನೆ ನೀಡಿದ್ದಾರೆ.

ಪ್ರತಿ ವರ್ಷ ಸಂಕ್ರಾಂತಿ ಹಬ್ಬದಂದು ಎಮ್ಮೆ ಓಡಿಸುವ ಸ್ಪರ್ಧೆ ಆಯೋಜನೆ ಮಾಡಲಾಗುತ್ತದೆ. ಈ ವರ್ಷವೂ ಯುವಕರ ಸಂಘಟನೆ, ಪಂಚ ಸಮಿತಿ, ಗವಳಿ ಸಮಾಜದ ವತಿಯಿಂದ ಎಮ್ಮೆ ಓಡಿಸುವ ಸ್ಪರ್ಧೆ ನಡೆದಿದೆ. ಜನರನ್ನು ಎಚ್ಚರಿಸಿ ತಿಳುವಳಿಕೆ ನೀಡಬೇಕಿದ್ದ ಆಡಳಿತ ಪಕ್ಷದ ಶಾಸಕ ಅನಿಲ್ ಬೆನಕೆ ನಿರ್ಲಕ್ಷ್ಯತೆ ವಹಿಸಿದ್ದಾರೆ.

Join Whatsapp