ಬಿಜೆಪಿ ಮೇಯರ್ ಸಂಬಂಧಿಯಿಂದ ಅಯೋಧ್ಯೆಯಲ್ಲಿ ಮತ್ತೊಂದು ಭೂ ಹಗರಣ

Prasthutha|

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರದ ಸಮೀಪದ ಭೂಮಿಯನ್ನು ಅಲ್ಲಿನ ಬಿಜೆಪಿ ಮೇಯರ್ ಅವರ ಸೋದರಳಿಯ 20 ಲಕ್ಷ ರೂ.ಗೆ ಖರೀದಿಸಿ ಅದನ್ನು ರಾಮಮಂದಿರ ಟ್ರಸ್ಟ್ ಗೆ 2.5 ಕೋಟಿ ರೂ.ಗೆ ಮಾರಾಟ ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

- Advertisement -

890 ಚದರ ಮೀಟರ್ ಜಾಗ ಇದಾಗಿದ್ದು, ಇದು ರಾಮ ದೇವಾಲಯ ಸಂಕೀರ್ಣದ ಸಮೀಪದಲ್ಲೇ ಇದೆ. ಈ ವರ್ಷದ ಫೆಬ್ರವರಿವರೆಗೆ ಈ ಜಾಗ ದೇವೇಂದ್ರ ಪ್ರಸಾದಾಚಾರ್ಯ ಎಂಬ ಮಹಂತ್ಗೆ ಸೇರಿತ್ತು. ಫೆಬ್ರವರಿ 20 ರಂದು ದೀಪು ನಾರಾಯಣ್ ಎಂಬವರು ಮಹಾಂತ ಅವರಿಂದ 20 ಲಕ್ಷ ರೂ.ಗೆ ಖರೀದಿಸಿದ್ದಾರೆ.

ನಾರಾಯಣ್ ಅಯೋಧ್ಯೆಯ ಮೇಯರ್ ಬಿಜೆಪಿ ಮುಖಂಡ ರಿಷಿಕೇಶ ಉಪಾಧ್ಯಾಯ ಅವರ ಸೋದರಳಿಯ. ಮೂರು ತಿಂಗಳ ನಂತರ, ಮೇ 11 ರಂದು, ನಾರಾಯಣ್ ಅವರು ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಗಾಗಿ ನರೇಂದ್ರ ಮೋದಿ ಸರ್ಕಾರ ಸ್ಥಾಪಿಸಿದ ರಾಮ ಜನ್ಮಭೂಮಿ ಟ್ರಸ್ಟ್ಗೆ 2.5 ಕೋಟಿ ರೂ.ಗೆ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದು ಭೂ ದಾಖಲೆಗಳು ತೋರಿಸುತ್ತವೆ.

- Advertisement -

ಇದಕ್ಕೂ ಮೊದಲು ಅಯೋಧ್ಯೆ ಬಳಿ 1.2 ಹೆಕ್ಟೇರ್ ಭೂಮಿಯನ್ನು 2 ಕೋಟಿಗೆ ಖರೀದಿಸಿ ಅದನ್ನು ರಾಮಮಂದಿರ ಟ್ರಸ್ಟ್ ಗೆ 18.5 ಕೋಟಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

Join Whatsapp