ಹಾಸನದಲ್ಲಿ ಕಾರು ಅಪಘಾತ | ಮಂಗಳೂರಿನ ಮೂವರು ಬಲಿ

Prasthutha|

ಹಾಸನ : ಹಾಸನದ ಕೆಂಚಟ್ಟಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಾರು ಲಾರಿ ಹಿಂಬದಿಗೆ ಡಿಕ್ಕಿಯಾಗಿ ಮಂಗಳೂರು ಮೂಲದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

- Advertisement -

ಬೆಳ್ತಂಗಡಿ ಮೂಲದ ಯೋಗೇಶ್ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಹಂಪ್ಸ್ ಇದ್ದ ಕಾರಣ ಲಾರಿ ಚಾಲಕ ಬ್ರೇಕ್ ಹಾಕಿದ್ದು, ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಾಸನ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp