ಬಿಜೆಪಿ ಮಹಿಳಾ ಮೋರ್ಚಾ ಕೋಶಾಧಿಕಾರಿ ಶರಣ್ಯಾ ಆತ್ಮಹತ್ಯೆ

Prasthutha|

ಪಾಲಕ್ಕಾಡ್: ಬಿಜೆಪಿ ಮಹಿಳಾ ಮೋರ್ಚಾದ ಸ್ಥಳೀಯ ನಾಯಕಿಯ ಮೃತದೇಹ ಪಾಲಕ್ಕಾಡ್ ಜಿಲ್ಲೆಯ ಮಟ್ಟುಮಂಥ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ.

- Advertisement -

ಬಿಜೆಪಿ ಮಹಿಳಾ ಮೋರ್ಚಾದ ಸ್ಥಳೀಯ ನಾಯಕಿ ಹಾಗೂ ಕೋಶಾಧಿಕಾರಿ ಶರಣ್ಯಾ (27) ಮೃತಪಟ್ಟವರು. ಅವರು ಸಿ.ಎನ್.ಪುರಂ ನಡುವಕ್ಕತ್ತುಪಲಯತು ರಮೇಶ್ ಅವರ ಪತ್ನಿ ಎಂದು ತಿಳಿದುಬಂದಿದೆ.

ಶರಣ್ಯಾ ಬಿಜೆಪಿಯ ಮಹಿಳಾ ಘಟಕವಾದ ಮಹಿಳಾ ಮೋರ್ಚಾದ ಪಾಲಕ್ಕಾಡ್ ಮಂಡಲದ ಕೋಶಾಧಿಕಾರಿಯಾಗಿದ್ದರು. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -

 ಶರಣ್ಯಾ ಬರೆದಿರುವ ಡೆಟ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೊಂದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಶರಣ್ಯಾ ಅವರು ತಂದೆ, ತಾಯಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Join Whatsapp