ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಯೊಂದಿಗೆ ವೇದಿಕೆ ಹಂಚಿಕೊಂಡ ಬಿಜೆಪಿ ನಾಯಕರು!

Prasthutha|

ಹೊಸದಿಲ್ಲಿ: ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಯೊಬ್ಬನೊಂದಿಗೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ ಫೊಟೋ ವೈರಲ್ ಆಗಿದೆ.

- Advertisement -

2002ರ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅವರ ಕುಟುಂಬಸ್ಥರನ್ನು ಕೊಂದು ಹಾಕಿದ ಅಪರಾಧಿಯಾಗಿರುವ ಶೈಲೇಶ್ ಚಮನ್‌ಲಾಲ್ ಭಟ್‌ನೊಂದಿಗೆ ದಾಹೋದ್ ಸಂಸದ ಜಸ್ವಂತ್ ಸಿನ್ ಭಭೋರ್ ಮತ್ತು ಲಿಮ್ಮೇಡಾ ಶಾಸಕ ಸೈಲೇಶ್ ಭಭೋ‌ ಅವರು ಶನಿವಾರ ಗುಜರಾತ್‌ನ ದಾಹೋದ್ ಜಿಲ್ಲೆಯ ಕರ್ಮಾಡಿ ಗ್ರಾಮದಲ್ಲಿ ನಡೆದ ಸರಕಾರಿ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಗೋಧ್ರಾ ಘಟನೆ ಬಳಿಕ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಎಲ್ಲ ಏಳು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಲ್ಲ ಹನ್ನೊಂದು ಮಂದಿ ಅಪರಾಧಿಗಳು ಅವಧಿ ಪೂರ್ವ ಬಿಡುಗಡೆ ಹೊಂದಿದ್ದರು.

- Advertisement -

2002ರಲ್ಲಿ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಸಿಬಿಐ ವಿಶೇಷ ನ್ಯಾಯಾಲಯ 2008ರ ಜನವರಿ 21ರಂದು ತೀರ್ಪು ನೀಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತ್ತು ಹಾಗೂ ಮುಂಬೈ ಹೈಕೋರ್ಟ್ ಇದನ್ನು ಎತ್ತಿ ಹಿಡಿದಿತ್ತು.



Join Whatsapp