ಜೆಡಿಎಸ್ ಕರೆದ ಸಭೆಗೆ ಫ್ಲೆಕ್ಸ್‌ನಲ್ಲಿ ಫೋಟೋಸ್ ಇದ್ದರೂ ಬಿಜೆಪಿ ನಾಯಕರು ಗೈರು

Prasthutha|

ಹಾಸನ: ಜೆಡಿಎಸ್ ಕರೆದ ಸಭೆಗೆ ಫ್ಲೆಕ್ಸ್‌ನಲ್ಲಿ ಫೋಟೋಸ್ ಇದ್ದರೂ ಬಿಜೆಪಿ ನಾಯಕರು ಗೃರಾಗಿದ್ದು, ದಳಪತಿಗಳಿಗೆ ಮುಖಭಂಗವಾದ ಘಟನೆ ನಡೆದಿದೆ.

- Advertisement -

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್‌ನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾರ್ಯಕರ್ತರ ಸಭೆಯ ಫ್ಲೆಕ್ಸ್‌ನಲ್ಲಿ ಬಿಜೆಪಿ ನಾಯಕರ ಭಾವಚಿತ್ರಗಳನ್ನೂ ಮುದ್ರಿಸಲಾಗಿತ್ತು. ಆದರೆ, ಸಭೆಯಲ್ಲಿ ಬಿಜೆಪಿಯ ಯಾವ ನಾಯಕರೂ ಪಾಲ್ಗೊಂಡಿರಲಿಲ್ಲ.

ಜೆಡಿಎಸ್ ಆಯೋಜಿಸಿದ ಸಭೆಯ ಫ್ಲೆಕ್ಸ್‌ನ ಒಂದು ಬದಿಯಲ್ಲಿ ವರಿಷ್ಠ ದೇವೇಗೌಡರು, ಕುಮಾರಸ್ವಾಮಿ ಭಾವಚಿತ್ರವಿದ್ದರೆ, ಇನ್ನೊಂದು ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್‌. ಯಡಿಯೂರಪ್ಪ ಅವರ ಚಿತ್ರಗಳಿದ್ದವು. ಕೆಳಭಾಗದಲ್ಲಿ ಜೆಡಿಎಸ್ ನಾಯಕರ ಜೊತೆಗೆ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ಎ.ಟಿ.ರಾಮಸ್ವಾಮಿ, ಎಚ್.ಎಂ.ವಿಶ್ವನಾಥ್, ಬಿ.ಆರ್.ಗುರುದೇವ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರ ಫೋಟೋಗಳಿದ್ದವು. ಆದರೆ ಸಭೆಗೆ ಯಾವ ಬಿಜೆಪಿ ನಾಯಕರೂ ಹಾಜರಾಗಲಿಲ್ಲ.

- Advertisement -



Join Whatsapp