ಬಿಜೆಪಿ – ಜೆಡಿಎಸ್ ಮೈತ್ರಿ: ಜಾತ್ಯತೀತ ಪ್ರಶ್ನಿಸಿದವರಿಗೆ ಉತ್ತರ ಕೊಟ್ಟ ದೇವೇಗೌಡ

Prasthutha|

ಬೆಂಗಳೂರು: ಜೆಡಿಎಸ್ ಎನ್ ಡಿಎ ಮೈತ್ರಿಕೂಟ ಸೇರಿದ್ದರಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಸೆಕ್ಯುಲರಿಸಂ ಬಗ್ಗೆ ಅನೇಕ ಮಂದಿ ಪ್ರಶ್ನಿಸಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಮನಸ್ಸಲ್ಲಿ ಕಿಂಚಿತ್ತೂ ಸೆಕ್ಯುಲರ್ ತೆಗೆದು ಹಾಕುವ ಮನಸ್ಸು ಮಾಡಿಲ್ಲ. ಮುಂದೆಯೂ ನಾವು ಮಾಡುವುದಿಲ್ಲ. ಇದನ್ನ ಖಂಡಾತುಂಡವಾಗಿ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

- Advertisement -


ನಾನು ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ರಾಜಕೀಯ ಮಾಡಿಲ್ಲ. ರಾಹುಲ್ ಗಾಂಧಿ ಕೈಯಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತ ಹೇಳಿಸಿದ್ರು. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಾಗ ಏನು ಮಾಡಿದ್ರು ಎಂದು ನಾನು ನೋಡಿಲ್ವಾ. ಈಗ ಮೈತ್ರಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ? ಎಂದು ಪರೋಕ್ಷವಾಗಿ ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದರು.


ಅಲ್ಪಸಂಖ್ಯಾತ ಆ ದಿನ ಸೋಲಿಸಿದ್ರು. ಫಾರೂಕ್ ಅಬ್ದುಲ್ ಅವರನ್ನ ಯಾಕೆ ಸೋಲಿಸಿದ್ರು. ಕಾಂಗ್ರೆಸ್ ಜೆಡಿಎಸ್ ಗೆ ಮೋಸ ಮಾಡಿರುವ 100 ಉದಾಹರಣೆಗಳನ್ನ ಕೊಡವೆ. ಕಾಂಗ್ರೆಸ್ ಹಲವಾರು ಬಾರಿ ಬ್ಲಂಡರ್ ಮಾಡಿದೆ. ಈಗ ನೀವು ಜಾತ್ಯತೀತ ಬಗ್ಗೆ ಮಾತನಾಡುತ್ತಿರಾ ಎಂದ ದೇವೇಗೌಡ ನಾವು ಯಾವುದಕ್ಕೂ ಕೇರ್ ಮಾಡಲ್ಲ ಎಂದು ಗುಡುಗಿದರು.



Join Whatsapp