ಬಿಜೆಪಿ ಕೋವಿಡ್ ಹರಡುತ್ತಿದೆ :ಅಖಿಲೇಶ್ ಯಾದವ್

Prasthutha|

ಲಕ್ನೋ: ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ಲಾಲಾರಸವನ್ನು ಸ್ಪರ್ಶಿಸಿ ಜನರಿಗೆ ಕರಪತ್ರಗಳನ್ನು ಹಂಚುತ್ತಿರುವ ಚಿತ್ರ ಮತ್ತು ದೃಶ್ಯಾವಳಿಗಳನ್ನು ತೋರಿಸುತ್ತಾ ಬಿಜೆಪಿ ನಾಯಕರು ಕೋವಿಡ್-19 ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರು ಮಾಸ್ಕ್ ಧರಿಸದೆ ಕರಪತ್ರಗಳನ್ನು ಹಂಚುವ ಮೂಲಕ ರೋಗವನ್ನು ಹರಡುತ್ತಿದ್ದಾರೆ. ಕೋವಿಡ್ ಹರಡುತ್ತಿರುವುದನ್ನು ಮರೆತು ಅಭಿಯಾನ ನಡೆಸುವವರ ವಿರುದ್ಧ ಚುನಾವಣಾ ಆಯೋಗ ತಡೆಯಾಜ್ಞೆ ಹೊರಡಿಸಬೇಕು ಎಂದು ಅವರು ಹೇಳಿದರು.
ಯುಪಿಯ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ನಡೆದ ಚುನಾವಣಾ ಅಭಿಯಾನದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜನರಡೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ,ಮಾಸ್ಕ್ ಧರಿಸದೆ ಮನೆ ಮನೆಗೆ ತೆರಳಿ ಲಾಲಾರಸ (ಉಗುಳು ನೀರು) ವನ್ನು ಸ್ಪರ್ಶಿಸಿ ಕರಪತ್ರಗಳನ್ನು ವಿತರಿಸುತ್ತಿರುವ ವೀಡಿಯೊವನ್ನು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಬಿಜೆಪಿಯ ಚುನಾವಣಾ ಅಭಿಯಾನದ ವಿರುದ್ಧ ಆರೋಪಗಳು ತೀವ್ರಗೊಂಡವು.
ಎಸ್ ಪಿ-ಆರ್ ಎಲ್ ಡಿ ಮೈತ್ರಿಕೂಟವು ರಾಜ್ಯದಲ್ಲಿ ನಕಾರಾತ್ಮಕ ರಾಜಕೀಯವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ. ಈ ಬಾರಿ ಬಿಜೆಪಿ ಉತ್ತರ ಪ್ರದೇಶದಿಂದ ಪಲಾಯನ ಮಾಡಲಿದೆ. ಅಧಿಕಾರಕ್ಕೆ ಬಂದ ನಂತರ 15 ದಿನಗಳಲ್ಲಿ ಕಬ್ಬು ರೈತರಿಗೆ ಹಣ ಒದಗಿಸಲಾಗುವುದು ಎಂದು ಅಖಿಲೇಶ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿ ಜೊತೆ ಮೈತ್ರಿ ಗೆ ಸೇರುವಂತೆ ಜಯಂತ್ ಚೌಧರಿಗೆ ಅಮಿತ್ ಶಾ ಆಹ್ವಾನ ನೀಡಿದ ಬಗ್ಗೆ ಲೇವಡಿ ಮಾಡಿದ ಅಖಿಲೇಶ್, ಬಿಜೆಪಿಯ ಭರವಸೆಗಳನ್ನು ಯಾರು ಸ್ವೀಕರಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.
ರೈತರು ಮತ್ತು ಸಾಮಾನ್ಯ ಜನರ ಉನ್ನತಿಯನ್ನು ಗುರಿಯಾಗಿಟ್ಟುಕೊಂಡು ಆರ್ ಎಲ್ ಡಿ ಮೈತ್ರಿಕೂಟಕ್ಕೆ ಸೇರಿದೆ. ಕೋವಿಡ್ ಶಿಷ್ಟಾಚಾರಪಾಲಿಸದೆ ಬಿಜೆಪಿ ಪ್ರಚಾರ ನಡೆಸುವ ಈ ಹಂತದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕು. ಸರ್ಕಾರಿ ನೌಕರರ ಒಂದು ವರ್ಗವು ಅಧಿಕಾರದಲ್ಲಿರುವವರ ಪರವಾಗಿ ಪೋಸ್ಟ್ ಆಗಿ ಮತ ಚಲಾಯಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಜಯಂತ್ ಚೌಧರಿ ಆರೋಪಿಸಿದರು. ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದ ಸರ್ಕಾರಿ ನೌಕರರು ತಮ್ಮ ಮತದಾರರ ಗುರುತಿನ ಚೀಟಿಯನ್ನು ಹಸ್ತಾಂತರಿಸಬಾರದು ಮತ್ತು ಒಂದೇ ಒಂದು ಮತವನ್ನು ವಿನಿಯೋಗಿಸಬಾರದು ಎಂದು ಚೌಧರಿ ಒತ್ತಾಯಿಸಿದರು.



Join Whatsapp