ಬೆಂಗಳೂರು: ಸ್ಮಾರ್ಟ್ ಸಿಟಿ ನೆಪದಲ್ಲಿ ಐತಿಹಾಸಿಕ ಮಾಂಸ ಮಾರುಕಟ್ಟೆಗೆ ಬಿಬಿಎಂಪಿಯಿಂದ ಕೊಡಲಿಯೇಟು !

Prasthutha|

ಬೆಂಗಳೂರು: ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಅಭಿವೃದ್ಧಿ ಯೋಜನೆಗಾಗಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕೆ.ಆರ್. ಮಾರುಕಟ್ಟೆ ಬಳಿ ಇರುವ ಶತಮಾನದಷ್ಟು ಹಳೆಯದಾದ ಸುಮಾರು 20 ಮಾಂಸದ ಅಂಗಡಿಗಳನ್ನು ಕೆಡವಲು ನಿರ್ಧರಿಸಲಾಗಿದೆ.

- Advertisement -

1921 ರಲ್ಲಿ ನಿರ್ಮಿಸಲಾದ ಈ ಐತಿಹಾಸಿಕ ರಚನೆಯು ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡದ ಮುಂಭಾಗದಲ್ಲಿದೆ. ಆದರೆ ವರ್ಷಗಳು ಕಳೆದರೂ ರಾಜ್ಯದ ಅಧಿಕಾರಿಗಳು ಗಮನ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹೇಳಲಾಗಿದೆ.

ಈ ನಡುವೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್ (ಬೆನ್‌ಎಸ್‌ಸಿಎಲ್) ಸಲ್ಲಿಸಿದ ಪುನರಾಭಿವೃದ್ಧಿ ಯೋಜನೆ ಸ್ಥಾಪಿಸುವ ನೆಪವೊಡ್ಡಿ ಐತಿಹಾಸಿಕ ಕಟ್ಟಡದಲ್ಲಿರುವ ಮಾಂಸದ ಅಂಗಡಿಗಳನ್ನು ಕೆಡವಿ ಹಾಕುವ ಸಲುವಾಗಿ ನೋಟಿಸ್ ನೀಡಿದ್ದಾರೆ.

- Advertisement -

ಬಾಡಿಗೆದಾರರಲ್ಲಿ ಒಬ್ಬರಾದ ಅರುಣ್ ಕುಮಾರ್ ಟಿ. ಜಿ. ಮಾತನಾಡಿ, ಈ ಕಟ್ಟಡವನ್ನು ಮೈಸೂರು ರಾಜರು ನಿರ್ಮಿಸಿದ್ದಾರೆ ಮತ್ತು ಇದನ್ನು ಪಾರಂಪರಿಕ ರಚನೆ ಎಂದು ಪರಿಗಣಿಸಲಾಗಿದೆ. 80 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ.ಬಿಬಿಎಂಪಿ ಮಾರುಕಟ್ಟೆಯನ್ನು ನಿರ್ವಹಣೆ, ದುರಸ್ತಿಗೆ ಮುಂದಾಗಿಲ್ಲ ಎಂದು ಆರೋಪಿಸಿದರು.

1999 ರಲ್ಲಿ ಸಿರ್ಸಿ ಸರ್ಕಲ್ ಮೇಲ್ಸೇತುವೆ ಪ್ರಾರಂಭವಾದ ನಂತರ ಪರಿಸ್ಥಿತಿ ಹದಗೆಟ್ಟಿದೆ. ಆದರೆ ಮೇಲ್ಸೇತುವೆ ಕಟ್ಟಡದ ಮುಂಭಾಗದಲ್ಲಿ ಸಾರ್ವಜನಿಕರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಅಂಗಡಿ ಹೊಂದಿದವರು ಈ ಬಗ್ಗೆ ಪ್ರತಿಕ್ರಿಯಿಸಿ, ತಮ್ಮ ತಾತ ಅಥವಾ ಮುತ್ತಜ್ಜರು ಮೈಸೂರು ರಾಜರಿಂದ ಈ ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದರೇ ಹೊರತು ಬೇರೆ ಯಾರಿಂದಲೂ ಅಲ್ಲ. ಈ ಕುರಿತು 1930 ಕ್ಕೂ ಮೊದಲಿನ ದಾಖಲೆ ಪತ್ರಗಳು ನಮ್ಮ ಬಳಿ ಇದೆ ಎಂದು ಹೇಳಿದ್ದಾರೆ.

Join Whatsapp