ದ್ವೇಷ ರಾಜಕಾರಣದಿಂದ ಮನುಷ್ಯ ಮನಸ್ಸುಗಳನ್ನು ಒಡೆಯುತ್ತಿರುವ ಬಿಜೆಪಿ: ಡಾ. ಶಫೀಕುರಹಮಾನ್ ಬರ್ಕ್

Prasthutha|

►ಮುಸ್ಲಿಮರೇನೂ ದುರ್ಬಲರಲ್ಲ, ತಮ್ಮ ಮಸೀದಿಗಳನ್ನು ದೇವಾಲಯಗಳಾಗಿ ಮಾಡಲು ಅವಕಾಶ ಮಾಡಿಕೊಡುವುದಿಲ್ಲ

- Advertisement -

ಲಕ್ನೋ: ಈ ಬಾರಿ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೋರಾಡುವುದರಿಂದ ಬಿಜೆಪಿ 50 ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎಂದು ಲೋಕಸಭಾ ಸದಸ್ಯ ಹಾಗೂ ಸಮಾಜವಾದಿ ಪಕ್ಷದ ನಾಯಕ ಡಾ. ಶಫೀಕುರಹಮಾನ್ ಬರ್ಕ್ ಹೇಳಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಲಾಭ ಪಡೆಯಲು ಏಕರೂಪ ನಾಗರಿಕ ಸಂಹಿತೆಯಂತಹ ವಿಭಜಕ ವಿಷಯಗಳನ್ನು ಎತ್ತುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರು ಮಸೀದಿಯನ್ನು ಮಂದಿರ ಎಂದು ಕರೆಯುತ್ತಾರೆ. ಪ್ರತೀ ಮಸೀದಿಯಲ್ಲೂ ದೇವಸ್ಥಾನವನ್ನು ಹುಡುಕುತ್ತಿದ್ದಾರೆ. ಆದರೆ ಮುಸ್ಲಿಮರೇನೂ ದುರ್ಬಲರಲ್ಲ, ತಮ್ಮ ಮಸೀದಿಗಳನ್ನು ದೇವಾಲಯಗಳಾಗಿ ಮಾಡಲು ಅವಕಾಶ ಮಾಡಿಕೊಡುವುದಿಲ್ಲ” ಎಂದು ಹೇಳಿದರು.

ವಾರಣಾಸಿಯ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣ ಮತ್ತು ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಮಸೀದಿ ಪ್ರಕರಣವನ್ನು ಉಲ್ಲೇಖಿಸಿದ ಅವರು “ಇದು ನಮ್ಮ ಮಸೀದಿ ಮತ್ತು ಅದನ್ನು ಕಾಪಾಡುವ ಜವಾಬ್ದಾರಿ ನಮ್ಮ ಸಮುದಾಯದ್ದಾಗಿದೆ, ಅದು ನಮ್ಮ ಪ್ರಾಣಕ್ಕಿಂತ ನಮಗೆ ಪ್ರಿಯವಾದುದರಿಂದ ಅದನ್ನು ರಕ್ಷಿಸಬೇಕು. ಮಸೀದಿಗೆ ಯಾವುದೇ ಅನ್ಯಾಯವಾದರೆ ನಮ್ಮ ಮರಣದ ನಂತರ ನಾವು ಅಲ್ಲಾಹನಿಗೆ ಉತ್ತರಿಸಬೇಕು” ಎಂದು ಬರ್ಕ್ ಹೇಳಿದರು.

ದ್ವೇಷದಿಂದ ಮನುಷ್ಯ ಮನಸ್ಸುಗಳನ್ನು ಒಡೆಯುವ ಏಕರೂಪ ನಾಗರಿಕ ಸಂಹಿತೆಯಂತಹ ಸಮಸ್ಯೆಗಳನ್ನು ಎತ್ತುತ್ತಿದ್ದಾರೆ. 2024 ರಲ್ಲಿ ಚುನಾವಣೆಗಳು ಬರುತ್ತಿರುವುದರಿಂದ, ಎಲ್ಲಾ ಹಿಂದೂಗಳು ತಮ್ಮ ಪಕ್ಷದೊಂದಿಗೆ ಇರಲು ಹಿಂದೂ-ಮುಸ್ಲಿಂ ದ್ವೇಷದ ಹೆಸರಿನಲ್ಲಿ ಎಲ್ಲವನ್ನೂ ಮಾಡುತ್ತಿದ್ದಾರೆ” ಎಂದು ಸಂಭಾಲ್ ಸಂಸದ ಶಫೀಕುರಹಮಾನ್ ಬರ್ಕ್ ಆಕ್ರೋಶ ವ್ಯಕ್ತಪಡಿಸಿದರು.

Join Whatsapp