ಬೆಂಗಳೂರು: ಮೈಸೂರು ದಸರಾ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಕರ್ನಾಟಕ ಸರಕಾರ ನಿರ್ಧರಿಸಿದ್ದು, ಕಾರ್ಯಸೂಚಿಯ ಭಿತ್ತಿ ಪತ್ರದಲ್ಲಿ ‘2021’ ದಿನಾಂಕ ಪ್ರಕಟಿಸಿದರ ಕುರಿತು ಬಿಜೆಪಿ ಇನ್ನೂ 2021 ರಲ್ಲೇ ಉಳಿದುಬಿಟ್ಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಭಿತ್ತಿ ಪತ್ರದಲ್ಲಿ ‘ದಿನಾಂಕ 19.07.2021’ ಎಂದು ಮುದ್ರಿಸಲಾಗಿತ್ತು. ಈ ಬಗ್ಗೆ ಅಪಹಾಸ್ಯ ಮಾಡಿದ ಸಿದ್ದು, ಬಿಜೆಪಿ ಸರಕಾರ ಇನ್ನೂ 2021 ರಲ್ಲೇ ಉಳಿದುಬಿಟ್ಟಿದೆ, ಟೇಕ್ ಆಫ್ ಆಗಿಯೇ ಇಲ್ಲ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಎಂದು ಟೀಕಿಸಿದ್ದಾರೆ.
ಸರಕಾರದಿಂದ ಇಂತಹ ಎಡವಟ್ಟುಗಳು ಸಾಮಾನ್ಯವಾಗಿದ್ದು, ಎರಡು ದಿನಗಳ ಹಿಂದೆ ಸರಕಾರಿ ಕಛೇರಿಯಲ್ಲಿ ವೀಡಿಯೋ ಚಿತ್ರೀಕರಣ ಸಂಬಂಧಿತ ಹೊರಡಿಸಿದ ಸುತ್ತೋಲೆಯಲ್ಲೂ ಹಲವಾರು ಅಕ್ಷರ ಲೋಪಗಳು ಉಂಟಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು