ಸುವರ್ಣ ಸೌಧಕ್ಕೆ ಬಿಜೆಪಿ ಸರ್ಕಾರ ರಣಹೇಡಿಯ ಫೋಟೋ ಹಾಕಿ ಕಳಂಕ ತರುತ್ತಿದೆ: ಬಿ.ಕೆ.ಹರಿಪ್ರಸಾದ್ ಕಿಡಿ

Prasthutha|

ಬೆಂಗಳೂರು: ಸುವರ್ಣಸೌಧದಲ್ಲಿ ಈ ನೆಲದ ದಾರ್ಶನಿಕರ ಭಾವಚಿತ್ರಗಳು ರಾರಾಜಿಸಬೇಕು. ಆದರೆ ಬಿಜೆಪಿ ಸರ್ಕಾರ ರಣಹೇಡಿಯ ಫೋಟೋ ಹಾಕಿ ಕಳಂಕ ತರುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾವು ಗಾಂಧಿ,ನೆಹರು,ಪಟೇಲ್, ಬಾಬಾ ಸಾಹೇಬ್, ಚೆನ್ನಮ್ಮ,ರಾಯಣ್ಣನ ಪರಂಪರೆ ಸಾರುತ್ತೇವೆ. ಬಿಜೆಪಿ ಕ್ಷಮಾಪಣೆ “ವೀರ”ನ ಇತಿಹಾಸವನ್ನಾದರೂ ಜನರ ಮುಂದೆ ಸತ್ಯ ಹೇಳುವ ಧೈರ್ಯ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಅಡಿಕೆ ಕ್ಯಾನ್ಸರ್ ಕಾರಕ ಎಂಬುದು ಚರ್ಚೆಯಾಗಲಿ, ಆದರೆ, ಬಿಜೆಪಿ ಅಂತೂ ಅಡಿಕೆ ಬೆಳೆಗಾರರಿಗೆ ಮಾರಕ ಎಂಬುದರಲ್ಲಿ ಅನುಮಾನವಿಲ್ಲ. ಡಬಲ್ ಇಂಜಿನ್ ಸರ್ಕಾರದ ಆಮದು ನೀತಿಯಿಂದ ಅಡಿಕೆ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ,ರೈತರು ಕಂಗಾಲಾಗಿದ್ದಾರೆ. ಅಡಿಕೆ ಬೆಳೆಗಾರರ ಮೇಲೆ ಯಾಕಿಷ್ಟು ಸಿಟ್ಟು ಬೊಮ್ಮಾಯಿರವರೇ, ಉತ್ತರ ಇದ್ಯಾ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

Join Whatsapp