ರಾಷ್ಟ್ರಗೀತೆಗೆ ಅವಮಾನ| ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ದೂರು

Prasthutha|

ಮುಂಬೈ: ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.

- Advertisement -

ಮುಂಬೈನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಮತಾ ರಾಷ್ಟ್ರಗೀತೆಯ ಕೆಲವು ಸಾಲುಗಳನ್ನು ಹಾಡಿ ಜೈ ಮಹಾರಾಷ್ಟ್ರ ಎಂದು ನಿಲ್ಲಿಸಿದ್ದರು. ಓರ್ವ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರು ಬಂಗಾಳ ಸಂಸ್ಕೃತಿ, ರಾಷ್ಟ್ರಗೀತೆ ಮತ್ತು ರವೀಂದ್ರನಾಥ ಠಾಗೋರ್ ಅವರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಬಂಗಾಳ ಘಟಕ ಆರೋಪಿಸಿದೆ.

‘ರಾಷ್ಟ್ರಗೀತೆಯು ರಾಷ್ಟ್ರೀಯತೆಯ ಪ್ರಬಲ ಅಭಿವ್ಯಕ್ತಿಯಾಗಿದೆ. ಚಿಕ್ಕ ಸರ್ಕಾರಿ ಉದ್ಯೋಗಿಗೂ ಕೂಡ ರಾಷ್ಟ್ರಗೀತೆಗೆ ಅವಮಾನ ಮಾಡಲು ಸಾಧ್ಯವಿಲ್ಲ. ಬಂಗಾಳದ ಮುಖ್ಯಮಂತ್ರಿ ನಮ್ಮ ರಾಷ್ಟ್ರಗೀತೆಯನ್ನು ತಿರುಚಿ ಹಾಡಿದ್ದಾರೆ. ಭಾರತೀಯ ವಿರೋಧ ಪಕ್ಷಗಳಿಗೆ ಸಂಸ್ಕೃತಿ ಮತ್ತು ದೇಶಭಕ್ತಿ ಇಲ್ಲವೇ?’ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ.

- Advertisement -

‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ಅವರಿಗೆ ರಾಷ್ಟ್ರಗೀತೆಯ ಶಿಷ್ಟಾಚಾರ ಗೊತ್ತಿಲ್ಲವೇ ಅಥವಾ ಗೊತ್ತಿದ್ದೂ ಅದನ್ನು ಅವಮಾನಿಸುತ್ತಿದ್ದಾರಾ? ಎಂದು ಬಿಜೆಪಿ ಪಶ್ಚಿಮ ಬಂಗಾಳ ಅಧ್ಯಕ್ಷ ಡಾ. ಸುಕಾಂತ ಮಜುಂದಾರ್ ಟ್ವೀಟ್ ಮಾಡಿದ್ದಾರೆ.

ಘಟನೆ ಕುರಿತು ತೃಣಮೂಲ ಕಾಂಗ್ರೆಸ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Join Whatsapp