‘ನನ್ನ ಅಣ್ಣನಿಗೂ ಆಕ್ಸಿಜನ್ ಸಿಗಲಿಲ್ಲ, ಹಾಗಾದರೆ ಪ್ರಭಾವಿಗಳ ಸಂಪರ್ಕವಿಲ್ಲದ ಜನ ಸಾಮಾನ್ಯರ ಪಾಡೇನು” ? : ಬಿಜೆಪಿ ಮಾಜಿ ಸಂಸದ ತರುಣ್ ವಿಜಯ್ ಟ್ವೀಟ್ ವೈರಲ್ !

Prasthutha|

►RSS ನಿಯತಕಾಲಿಕ ‘ಪಾಂಚಜನ್ಯ’ದ ಮಾಜಿ ಸಂಪಾದಕ ತರುಣ್ ವಿಜಯ್!

- Advertisement -

ಫರೀದಾಬಾದ್ : ” ನನ್ನ ಹಿರಿಯ ಅಣ್ಣ (ಸೋದರ ಸಂಬಂಧಿ) ಯನ್ನು ಆಸ್ಪತ್ರೆಗೆ ಕರೆದೊಯ್ದೆ. ಅಲ್ಲಿ ಪ್ಲಾಸ್ಮಾ ಲಭ್ಯವಿರಲಿಲ್ಲ. ಆಕ್ಸಿಜನ್ ಕೂಡಾ ಇರಲಿಲ್ಲ. ರೋಗಿಯನ್ನು ಮನೆಗೆ ಕರೆದೊಯ್ಯಿರಿ” ಎಂದು ಆಸ್ಪತ್ರೆಯಲ್ಲಿ ಹೇಳಲಾಯಿತು. ನಾವು ಎತ್ತ ಸಾಗುತ್ತಿದ್ದೇವೆ. ನಮಗೆ ಇಂತಹಾ ಪರಿಸ್ಥಿತಿಯಾದರೆ, ಇನ್ನು ಪ್ರಭಾವಿಗಳ ಸಂಪರ್ಕವಿಲ್ಲದ ಜನ ಸಾಮಾನ್ಯರ ಪಾಡೇನು ? ಎಂದು ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯನಾಗಿದ್ದ ಮತ್ತು ಹಿರಿಯ ಬಿಜೆಪಿ ನಾಯಕ ತರುಣ್ ವಿಜಯ್ ಟ್ವೀಟ್ ಮೂಲಕ ತನ್ನ ಅಳಲು ತೋಡಿಕೊಂಡಿದ್ದಾರೆ. ಇದು ಈ ದೇಶದ ಸದ್ಯದ ಪರಿಸ್ಥಿತಿಯನ್ನು ತೋರಿಸುತ್ತಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

https://twitter.com/Tarunvijay/status/1385630863535206401

ತರುಣ್ ವಿಜಯ್ ಅವರು ಆರೆಸ್ಸೆಸ್ ಸಿದ್ಧಾಂತದ ಪ್ರಬಲ ಪ್ರತಿಪಾದಕರಾಗಿದ್ದಾರೆ. ಮಾತ್ರವಲ್ಲ ಆರೆಸ್ಸೆಸ್ ಮೂಲದ ನಿಯತ ಕಾಲಿಕವಾಗಿರುವ ‘ಪಾಂಚಜನ್ಯ’ದ ಸಂಪಾದಕರಾಗಿದ್ದರು. ಅವರ ಈ ಟ್ವೀಟ್ ವೈರಲ್ ಆಗಿದ್ದು, ನೆಟ್ಟಿಗರು ಅವರಿಗೆ, ನೀವು ಯಾರನ್ನು ಪ್ರಶ್ನಿಸುತ್ತಿದ್ದೀರಿ, ನಿಮ್ಮ ಸ್ವಂತ ಪಕ್ಷವನ್ನೇ? ಎಂದು ಲೇವಡಿ ಮಾಡಿದ್ದಾರೆ.

Join Whatsapp