ತುಮಕೂರು: ಬಿಜೆಪಿ ಪಕ್ಷದವರೇ ಕುತಂತ್ರ ಮಾಡಿ ನನ್ನ ಸೋಲಿಸಿದ್ದರು ಎಂದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅಸಮಾಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್ – ಜೆಡಿಎಸ್ ಜೊತೆ ಬಿಜೆಪಿಯವರೂ ಸೇರಿ ಕುತಂತ್ರ ಮಾಡಿ ನನ್ನ ಸೋಲಿಸಿದರು ಎಂದು ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸುರೇಶ್ ಗೌಡ ತಿಳಿಸಿದ್ದಾರೆ.
ಸಚಿವ ಮಾಧುಸ್ವಾಮಿ ವಿರುದ್ಧವೂ ಅಸಮಾಧನ ವ್ಯಕ್ತಪಡಿಸಿರುವ ಸುರೇಶ್ ಗೌಡ, ತುಮಕೂರು ಗ್ರಾಮಾಂತರ ಕ್ಷೇತ್ರದ ಯಾವ ಕೆರೆಗೂ ನೀರು ಬಂದಿಲ್ಲ. ಸಚಿವ ಮಾಧುಸ್ವಾಮಿ ಇತ್ತ ಗಮನ ಹರಿಸಿ ನೀರು ಬಿಡಬೇಕು. ಗ್ರಾಮಾಂತರ ಪ್ರದೇಶಕ್ಕೆ ಹೇಮಾವತಿ ನೀರಿನ ವಿಚಾರದಲ್ಲಿ ತಾರತಮ್ಯವಾಗಿದೆ. ನಾನು ರಾಜೀನಾಮೆ ಕೊಟ್ಟು ಬಂದಿರೋದೆ ಇಂಥಹ ವಿಚಾರಗಳ ಬಗ್ಗೆ ನೇರವಾಗಿ ಟೀಕೆ ಮಾಡೋದಕ್ಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.