ಶಾಸಕ ಟಿ ರಾಜಾ ಸಿಂಗ್ ಅಮಾನತು ರದ್ದುಗೊಳಿಸಿದ ಬಿಜೆಪಿ

Prasthutha|

- Advertisement -

ಹೈದರಾಬಾದ್: ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇಂದು ತೆಲಂಗಾಣ ಶಾಸಕ ಟಿ ರಾಜಾ ಸಿಂಗ್ ಮೇಲಿನ ಅಮಾನತು ಹಿಂಪಡೆದಿದೆ. ಪಕ್ಷವು ನೀಡಿದ ಶೋಕಾಸ್ ನೋಟಿಸ್‌ ಗೆ ಅವರು ನೀಡಿದ ಉತ್ತರಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮ ಎಂದು ಬಿಜೆಪಿ ಹೇಳಿದೆ.

ಕಳೆದ ಆಗಸ್ಟ್‌ ನಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಅವರು ಮಾಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು.

- Advertisement -

ಶೋಕಾಸ್ ನೋಟಿಸ್ ಗೆ ನಿಮ್ಮ ಉತ್ತರ ಮತ್ತು ವಿವರಣೆಯನ್ನು ಪಕ್ಷದ ಕೇಂದ್ರ ಶಿಸ್ತು ಸಮಿತಿ ಪರಿಗಣಿಸಿದೆ. ನಿಮ್ಮ ಉತ್ತರವನ್ನು ಆಧರಿಸಿ ಸಮಿತಿಯು ಈ

ನಿಮ್ಮ ಅಮಾನತು ಹಿಂಪಡೆದಿದೆ ಎಂದು ಪಕ್ಷದ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Join Whatsapp