ಒಬಿಸಿ ಮಸೂದೆ ಪಾಸಾಗುತ್ತಲೇ ಮೇಲ್ಜಾತಿ ಆಯೋಗಕ್ಕಾಗಿ ಬಿಜೆಪಿ ಕೂಗು

Prasthutha|

ನವದೆಹಲಿ: ಸಂಸತ್ತಿನಲ್ಲಿ ಒಬಿಸಿ- ಇತರೆ ಹಿಂದುಳಿದ ಜಾತಿಗಳ ಸಂವಿಧಾನ ತಿದ್ದುಪಡಿ 127ನೇ ಮಸೂದೆ ಪಾಸಾದ ಮರುದಿನವೇ ಬಿಜೆಪಿಯ ನಾಯಕರು ಮೇಲು ಜಾತಿಯವರಿಗಾಗಿ ಸವರ್ಣ ಆಯೋಗ ರಚಿಸುವಂತೆ ಹಲವಾರು ರಾಜ್ಯಗಳಲ್ಲಿ ಕೂಗು ಹಾಕಿದ್ದಾರೆ.
ಅಧಿಕೃತವಾಗಿ ಈ ಬಗ್ಗೆ ಅವರು ಮಾತನಾಡುತ್ತಿಲ್ಲ, ಒಟ್ಟಾರೆ ಕೂಗು ಚಾಲ್ತಿಯಲ್ಲಿರಬೇಕು ಎಂಬಂತೆ ಈ ವಿಷಯ ಎತ್ತಿಕೊಂಡಿದ್ದಾರೆ. ಮಧ್ಯ ಪ್ರದೇಶದ ಶಾಸಕ ನಾರಾಯಣ ತ್ರಿಪಾಠಿಯವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣರಿಗೆ ಆದಷ್ಟು ಶೀಘ್ರ ಸವರ್ಣ ಆಯೋಗ ರಚಿಸುವಂತೆ ಪತ್ರ ಬರೆದಿದ್ದಾರೆ.

- Advertisement -


ಸಾಮಾನ್ಯ ವರ್ಗದಲ್ಲಿರುವ ಎಲ್ಲರ ಪರವಾಗಿ ಆಯೋಗ ರಚಿಸುವಂತೆ ನಾನು ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದ್ದಾರೆ.
“ಇತರೆ ಹಿಂದುಳಿದ ವರ್ಗದವರ ಪರ ಮಾಡಿದ ತೀರ್ಮಾನದಿಂದ ನನಗೆ ಸಂತೋಷವಾಗಿದೆ. ಆದರೆ ಸಾಮಾನ್ಯ ವರ್ಗದಲ್ಲಿ ಇರುವವರ ಹಿತವನ್ನು ಸಹ ಕಾಪಾಡಬೇಕು ಎನ್ನುತ್ತಾರೆ ತ್ರಿಪಾಠಿ.


“ಜನವರಿ 26ರಂದು ರೇವಾದಲ್ಲಿ ನೀವು ಸವರ್ಣ ಆಯೋಗ ರಚಿಸುವ ಬಗ್ಗೆ ಹೇಳಿದಿರಿ. ಆದರೆ ಅನಂತರ ಮರೆತು ಬಿಟ್ಟಿದ್ದೀರಿ” ಎಂದು ಮುಖ್ಯಮಂತ್ರಿಗಳನ್ನು ತ್ರಿಪಾಠಿ ನೆನಪೋಲೆಯಲ್ಲಿ ತಿಳಿಸಿದ್ದಾರೆ. ಸವರ್ಣ ಆಯೋಗ ರಚಿಸಿದರೆ ಗ್ವಾಲಿಯರ್, ಚಂಬಲ್, ವಿಂಧ್ಯಾ ಪ್ರದೇಶಗಳಲ್ಲಿ ಬಿಜೆಪಿ ಬಲವಾಗುತ್ತದೆ. ಕ್ಷತ್ರಿಯ, ವೈಶ್ಯ, ಬ್ರಾಹ್ಮಣರಿಗೆ ಅನುಕೂಲ ಮಾಡುವಂತೆ ಈ ಆಯೋಗ ಇರಬೇಕು ಎಂದಿದ್ದಾರೆ ತ್ರಿಪಾಠಿ. “ನಮ್ಮ ಸರಕಾರವು ಈಗಾಗಲೇ ಬ್ರಾಹಮಣರಿಗೆ 10% ಮೀಸಲಾತಿ ನೀಡಿದೆಯಾದ್ದರಿಂದ ಇಂಥ ಆಯೋಗದ ಅಗತ್ಯವಿಲ್ಲ” ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಆರ್. ಪಿ. ಸಿಂಗ್ ಹೇಳಿದ್ದಾರೆ.

Join Whatsapp